ದೇಶದ 100 ಜುವೆಲ್ಲರಿಗಳಲ್ಲಿ ಜಿ.ಎಲ್.ಗೆ ಸ್ಥಾನ

0

ಪುತ್ತೂರು: ದಿ ಆರ್ಟ್ ಆಫ್ ಜುವೆಲ್ಲರಿ(ಎಒಜೆ) ಮ್ಯಾಗಜಿನ್ ೨೦೨೪-೨೫ರ ಅವಧಿಗೆ ಭಾರತದ ಸರಿಸುಮಾರು ೫ ಲಕ್ಷ ಜುವೆಲ್ಲರಿಗಳ ಪೈಕಿ ಒಟ್ಟು ವಾರ್ಷಿಕ ವಹಿವಾಟಿನ ಆಧಾರದ ಮೇಲೆ ಜುವೆಲ್ಲರಿ ಸಂಸ್ಥೆಗಳ ಬ್ಯಾಂಕಿಂಗ್ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಪುತ್ತೂರು ಸೇರಿದಂತೆ ಹಲವು ಕಡೆ ಶಾಖೆಗಳನ್ನು ಹೊಂದಿರುವ ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ಸಂಸ್ಥೆ ಟಾಪ್ ೧೦೦ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ದಿ ಆರ್ಟ್ ಆಫ್ ಜುವೆಲ್ಲರಿ ಸಂಚಿಕೆಯಲ್ಲಿ ಭಾರತದಲ್ಲಿ ಚಿನ್ನ ಮತ್ತು ಆಭರಣಗಳ ಉದ್ಯಮದಲ್ಲಿನ ಸಾಧಕರನ್ನು ಗುರುತಿಸಲಾಗುತ್ತದೆ. ಈ ಬಾರಿ ಟಾಪ್ ೧೦೦ ಚಿನ್ನದ ವ್ಯಾಪಾರಿಗಳನ್ನು ಆರ್ಥಿಕ ವರ್ಷದ ೨೦೨೫ರಲ್ಲಿ ಒಟ್ಟು ವ್ಯವಹಾರ ಆದಾಯದ ಆಧಾರದ ಮೇಲೆ ಶ್ರೇಯಾಂಕ ನೀಡಲಾಗಿದೆ. ಈ ಪಟ್ಟಿಯನ್ನು ಇಂಟರ್‌ನ್ಯಾಷನಲ್ ಜಿಮೋಲಿಜಿಕಲ್ ಇನ್‌ಸ್ಟಿಟ್ಯೂಟ್ ಸಹಯೋಗದೊಂದಿಗೆ ಬಿಡುಗಡೆ ಮಾಡಲಾಗಿದ್ದು, ಪುತ್ತೂರಿನ ಜಿ.ಎಲ್.ಆಚಾರ್ಯ ಚಿನ್ನಾಭರಣ ಮಳಿಗೆ ಸ್ಥಾನ ಪಡೆದುಕೊಂಡಿದೆ.
ದಿ ಆರ್ಟ್ ಆಫ್ ಜುವೆಲ್ಲರಿ ಮ್ಯಾಗಜಿನ್ ಭಾರತದ ಆಭರಣ ಉದ್ಯಮದ ಪ್ರಮುಖ ಸುದ್ದಿ ಮತ್ತು ವಿಶ್ಲೇಷಣೆಗಳನ್ನು ಒದಗಿಸುವ ಪ್ರಮುಖ ಮಾಧ್ಯಮವಾಗಿದೆ. ಜುವೆಲ್ಲರಿಗಳ ಒಟ್ಟು ವ್ಯವಹಾರದಲ್ಲಿ ಈ ಆಯ್ಕೆ ನಡೆಯುತ್ತದೆ. ‘ನಮ್ಮ ಸಂಸ್ಥೆ ೧೦೦ ಚಿನ್ನಾಭರಣಗಳ ಮಳಿಗೆಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುವುದು ಸಂತೋಷದ ಸಂಗತಿ’ ಎಂದು ಸಂಸ್ಥೆ ಚೇರ್ಮನ್ ಜಿ.ಎಲ್.ಬಲರಾಮ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.