














ಬಸವೇಶ್ವರ ದೇವಳದ ವತಿಯಿಂದ ನಡೆದ 9ನೇ ವರ್ಷದ ವಸಂತ ವೇದ ಪಾಠ ಶಿಬಿರದ ಸಮಾರೋಪ ಸಮಾರಂಭ ಮೇ.22 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.
ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಗಿರಿಧರ ಸ್ಕಂದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೇವಳದ ಪ್ರಧಾನ ಅರ್ಚಕರು ಹಾಗೂ ಗುರುಗಳಾದ ಗಣೇಶ ದೀಕ್ಷಿತ್ , ಶಿಬಿರದ ಸಂಚಾಲಕರು ಹಾಗೂ ಅಧ್ಯಾಪಕರೂ ಆದ ಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಅರುಣ, ವರುಣ , ಆಶ್ರಿತ್ ಮತ್ತು ಮನು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.







