ಕಲ್ಕುಡ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಜೂ.15 ರಿಂದ 18 ರವರೆಗೆ ನಡೆಯಲಿರುವ ಕಲಶೋತ್ಸವದ ಪೂರ್ವ ಸಿದ್ಧತಾ ಸಭೆ

ಸುಳ್ಯ ಗಾಂಧಿನಗರದ ನಾವೂರಿನ ಶ್ರೀ ಕಲ್ಕುಡ ದೈವಸ್ಥಾನದಜೀರ್ಣೋದ್ಧಾರ ಕಾರ್ಯದ ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿದ್ದು ಜೂ.15 ರಿಂದ 18 ರ ತನಕ ಪುನರ್ ಪ್ರತಿಷ್ಠಾ ಕಲಶೋತ್ಸವದ ಕಾರ್ಯಕ್ರಮ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ‌ಹಾಗೂ ಪೂರ್ವ ತಯಾರಿ ಸಿದ್ಧತಾ ಸಭೆಯು ಮೇ.24 ರಂದುದೈವಸ್ಥಾನದ ಸಭಾಭವನದಲ್ಲಿ ಜೀ.ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ರವರ ಅಧ್ಯಕ್ಷತೆ ಯಲ್ಲಿ ನಡೆಯಿತು.

ಪುನರ್ ಪ್ರತಿಷ್ಠಾ ಕಲಶೋತ್ಸವದ ಆಮಂತ್ರಣ ಪತ್ರವನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೃಷ್ಣ ಕಾಮತ್ ಅರಂಬೂರು ರವರು ಬಿಡುಗಡೆ ಗೊಳಿಸಿದರು.
ದೈವಸ್ಥಾನದ ನಡೆಯಲ್ಲಿ ಆಮಂತ್ರಣ ಪತ್ರವಿರಿಸಿ ಆಡಳಿತಧರ್ಮದರ್ಶಿಗಳಾದ ಪಿ.ಕೆ ಉಮೇಶ್ ರವರು ಪ್ರಾರ್ಥಿಸಿ,ಮುಂದಿನ ತಿಂಗಳು ನಡೆಯಲಿರುವ ಕಲಶೋತ್ಸವಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ವಿವರ ನೀಡಿದರು.

ಪ್ರತಿಷ್ಠಾ ಕಲಶೋತ್ಸವದ ಅಂಗವಾಗಿ ಭಕ್ತಾದಿಗಳ ಸಮ್ಮುಖದಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು. ಆಮಂತ್ರಣ ಪತ್ರ ಹಂಚುವ ಮತ್ತು ಆರ್ಥಿಕ ಕ್ರೋಢಿಕರಣದ ಜವಬ್ದಾರಿ ನಿರ್ವಹಿಸಲು ನಗರದ ವಾರ್ಡುವಾರು ಸಮಿತಿಯ ವರಿಗೆ ಹಂಚಿಕೆ ಮಾಡಲಾಯಿತು.‌

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ ಪ್ರಭು, ಕೋಶಾಧಿಕಾರಿ ಅವಿನಾಶ್ ಕುರುಂಜಿ, ಕಾರ್ಯದರ್ಶಿ ದಿನೇಶ್‌ಮಡಪ್ಪಾಡಿ,ಪದಾಧಿಕಾರಿಗಳಾದ ಜಯಪ್ರಕಾಶ್ ರೈ ಎನ್,ಸದಾನಂದ ಮೂಲೆಮಜಲು, ಡಿ.ಎಸ್ ಗಿರೀಶ್ ದೇವರಗುಂಡ,ದೊಡ್ಡಣ್ಣ ಬರೆಮೇಲು, ಸೋಮನಾಥ ಪೂಜಾರಿ, ಭಾಸ್ಕರ ಗೌಡ ಐಡಿಯಲ್, ಚಂದ್ರಶೇಖರ ಎಸ್, ಕೇಶವ ನಾಯಕ್ ಸುಳ್ಯ, ಸತ್ಯ ಪ್ರಸಾದ್ ಕೆ, ಜನಾರ್ದನ ದೋಳ, ಚಂದ್ರಶೇಖರ ಅಡ್ಪಂಗಾಯ, ವಿನಯಕುಮಾರ್ ಕಂದಡ್ಕ ಮತ್ತಿತರರು ಉಪಸ್ಥಿತರಿದ್ದರು.

ಆಡಳಿತ ಧರ್ಮದರ್ಶಿ ಮಂಡಳಿಯ ಸದಸ್ಯರು ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು, ದೈವಸ್ಥಾನದ ಪೂಜಾರಿಗಳು ಹಾಗೂ ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು. ಸಮಿತಿಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.