ಬಜಪ್ಪಿಲ ಉಳ್ಳಾಕುಲು ಮಡಕ ಜಾತ್ರೆ ಆರಂಭ

0

ಮೇಷ ತಿಂಗಳ 10 ರಂದು ಕೂಡಿ 11 ರಂದು ನಡೆಯುವ ಇತಿಹಾಸ ಪ್ರಸಿದ್ಧ ಪೇರಾಲು ಬಜಪ್ಪಿಲ ಉಳ್ಳಾಕುಲು ಮತ್ತು ಪರಿವಾರ ದೈವಗಳ ಮಡಕ ಜಾತ್ರೆ ಇಂದು ಬೆಳಿಗ್ಗೆ ಆರಂಭಗೊಂಡಿದೆ.ಬೆಳಿಗ್ಗೆ 8 ಗಂಟೆಗೆ ಉಳ್ಳಾಕುಲು ಚಾವಡಿಯಿಂದ ಭಂಡಾರದ ಜತೆ ಹೊರಟ ಉಳ್ಳಕುಲು ದೈವ ಕುತ್ಯಾಡಿಯಲ್ಲಿ ಅಡ್ಡಣ ಪೆಟ್ಟು ನಡೆದು ಬಳಿಕ ಮಾಡಕ್ಕೆ ತಲುಪಿದೆ. ಅಲ್ಲಿ ದೈವ ನರ್ತನ ಆರಂಭಗೊಂಡಿದೆ. ಬಜಪ್ಪಿಲ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರ ಹೇಮಂತ ಕುಮಾರ್ ಗೌಡರಮನೆ ಮತ್ತು ಪೇರಾಲು ಹದಿನಾರು ಮನೆಯವರು ಮತ್ತು ಇತರ ಭಕ್ತಾದಿಗಳು ಸೇರಿದ್ದಾರೆ.