ಕೆದಿಲ ತರವಾಡು ಮನೆ ಗೃಹ ಪ್ರವೇಶ, ನಾಗಪ್ರತಿಷ್ಠೆ, ಶ್ರೀ ರುದ್ರಚಾಮುಂಡಿ, ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ಧರ್ಮ ನಡಾವಳಿ

0

ಕೆದಿಲ ತರವಾಡು ಮನೆ ಗೃಹ ಪ್ರವೇಶ,
ನಾಗಪ್ರತಿಷ್ಠೆ ಮತ್ತು ಶ್ರೀ ರುದ್ರಚಾಮುಂಡಿ ಹಾಗೂ ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ಧರ್ಮ ನಡಾವಳಿ ಮೇ.21 ರಿಂದ ಮೇ. 24ರ ತನಕ ನಡೆಯಿತು.

ಮೇ.21 ರ ಸಂಜೆ ತಂತ್ರಿಗಳ ಆಗಮನ ವಿವಿಧ ವೈಧಿಕ ಕಾರ್ಯಕ್ರಮ, ಮೇ. 22 ರಂದು ಗಣಪತಿ ಹವನ ವಿವಿಧ ಪೂಜೆಗಳು ನಾಗ ಪ್ರತಿಷ್ಠೆ, ಕಲಶಾಭಿಷೇಕ, ನಾಗ ತಂಬಿಲ, ಆಶ್ಲೇಷ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಮೇ. 23 ರಂದು ಗಣಪತಿ ಹವನ, ದೇವೀ ಸ್ಥಳ ಶುದ್ದೀಕರಣ, ತರವಾಡು ಮನೆ ಗೃಹ ಪ್ರವೇಶ, ಶ್ರೀ ರುದ್ರಚಾಮುಂಡಿ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ ಮತ್ತು ಅನ್ನಸಂತರ್ಪಣೆ ನಡೆಯಿತು.
ಸಾಯಂಕಾಲ ಶ್ರೀ ಭಂಡಾರ ಹಿಡಿದು ಕುಲೆಭೂತ, ಸತ್ಯದೇವತೆ,
ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕೊರತಿ ದೈವಗಳ ನೇಮೋತ್ಸವ‌ ನಡೆಯಿತು.


ಮೇ. 24 ಬೆಳಿಗ್ಗೆ ಶ್ರೀ ರುದ್ರಚಾಮುಂಡಿ ಧರ್ಮದೈವ ನೇಮೋತ್ಸವ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು.