ಎಣ್ಮೂರು ಗರಡಿಯಲ್ಲಿ ಪತ್ತನಾಜೆ ಆಚರಣೆ

0

ಎಣ್ಮೂರು ಆದಿ ನಾಗಬ್ರಹ್ಮ ಕೋಟಿಚೆನ್ನಯ್ಯ ಗರಡಿಯಲ್ಲಿ ಮೇ ೨೫ ರಂದು ಪತ್ತನಾಜೆ ಕಾರ್ಯಕ್ರಮ ನಡೆಯಿತು. ಹೋಮ, ತಂಬಿಲ, ಹರಿಕೆ ತಂಬಿಲ, ದರ್ಶನ ಸೇವೆ, ಹರಿಕೆ ಒಪ್ಪಿಸುವುದು, ಪ್ರಸಾದ ಸ್ವೀಕರಿಸಿ ಅನ್ನ ಭೋಜನ ಪ್ರಸಾದ ನಡೆಯಿತು.


ಇಲ್ಲಿ ಪತ್ತನಾಜೆಯಲ್ಲಿ ಬಾಗಿಲು ಹಾಕಿದರೆ ನಂತರ ಚೌತಿ ದಿನದಂದು ಬಾಗಿಲು ತೆರೆದು ಚೌತಿ ಹಬ್ಬ ನಡೆಯುವುದು ಹಿಂದಿನಿಂದಲೂ ಬಂದ ಪದ್ಧತಿ. ಗರಡಿಯ ಅನುವಂಶಿಕ ಆಡಳ್ತೆದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಶ್ರೀಮತಿ ಪದ್ಮ ಆರ್. ಶೆಟ್ಟಿ ಮತ್ತು ಕಟ್ಟಬೀಡು ಕುಟುಂಬ ಸದಸ್ಯರು, ಹಾಗೂ ಎನ್.ಜಿ. ಲೋಕನಾಥ ರೈ ಪಟ್ಟೆ, ಊರ ಪರ ಊರ ಭಕ್ತರು ಉಪಸ್ಥಿತರಿದ್ದರು.
(ವರದಿ : ಎಎಸ್‌ಎಸ್ ಅಲೆಕ್ಕಾಡಿ)