ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದ ಪ್ರೇಮಲತಾ ಕಾವುರವರಿಗೆ ಐವರ್ನಾಡು ಗ್ರಾ.ಪಂಚಾಯತ್ ನಿಂದ ದಂಡ

0

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಪ್ರೇಮಲತಾ ಕಾವು ಎಂಬವರಿಗೆ ರೂ 6,000.00 ದಂಡ ವಿಧಿಸಿದ ಘಟನೆ ಮೇ.27 ರಂದು ನಡೆದಿದೆ.


ಬೆಂಗಮಲೆಯಲ್ಲಿ ತ್ಯಾಜ್ಯ ಎಸೆದಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ತ್ಯಾಜ್ಯ ಎಸೆದ ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಪರಿಶೀಲಿಸಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಗ್ರಾಮ ಪಂಚಾಯತ್ ಕಛೇರಿಗೆ ಕರೆಸಿದ್ದು ಕಸ ಎಸೆದಿರುವುದನ್ನು ಒಪ್ಪಿಕೊಂಡ ಪ್ರೇಮಲತಾರವರು ದಂಡ ಪಾವತಿಸಿ ತೆರಳಿರುವುದಾಗಿ ತಿಳಿದುಬಂದಿದೆ.