













ಕೆ.ವಿ.ಜಿ ಇ೦ಜಿನಿಯರಿ೦ಗ್ ಮಹಾವಿದ್ಯಾಲಯದ ೨೦೨೬ನೇ ಸಾಲಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಚಿರಾಗ್ ಕೆ., ಮನೋಜ್ ಕುಮಾರ್ ವಿ., ಪೃಥ್ವಿರಾಜ್ ಯು.ಎಂ., ಎ. ನಿಖಿಲ್ ರೈ Dirak India Panel Fittings Private Limited. ಕಂಪೆನಿಗೆ ಆಯ್ಕೆಯಾಗಿರುತ್ತಾರೆ. ಇವರಿಗೆ ಕಂಪೆನಿಯಿಂದ 3.4 ಲಕ್ಷ ವಾರ್ಷಿಕ ವೇತನ ಇದೆಯೆಂದು ಕಂಪೆನಿ ತಿಳಿಸಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಕಮಿಟಿ ‘ಬಿ’ ಇದರ ಅಧ್ಯಕ್ಷರಾಗಿರುವ ಡಾ. ರೇಣುಕಾಪ್ರಸಾದ್ ಕೆ.ವಿ., ಸೆಕ್ರೆಟರಿ, ಎ.ಒ.ಎಲ್.ಇ(ರಿ) ಕಮಿಟಿ ‘ಬಿ’ ಡಾ. ಜ್ಯೋತಿ ಆರ್. ಪ್ರಸಾದ್, ಡೈರೆಕ್ಟರ್ ಎ.ಒ.ಎಲ್.ಇ.(ರಿ) ಕಮಿಟಿ ‘ಬಿ’ ಡಾ. ಅಭಿಜ್ಞ ಕೆ.ಆರ್., ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಮೌರ್ಯ ಆರ್. ಕುರುಂಜಿ, ಪ್ರಾಂಶುಪಾಲರು ಡಾ. ಸುರೇಶ ವಿ., ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ., ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ರಾಘವೇಂದ್ರ ಕೆ. ಬಾಬುರಾಯ ಕಾಮತ್, ಟ್ರೈನಿಂಗ್ & ಪ್ಲೇಸ್ಮೆ೦ಟ್ ವಿಭಾಗದ ಮುಖ್ಯಸ್ಥ ಪ್ರೊ. ಪ್ರಶಾಂತ್ ಕಕ್ಕಾಜೆ ಹಾಗೂ ಪ್ರಾಧ್ಯಾಪಕ ವೃಂದ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.







