ಶ್ರೀಮತಿ ಜಾನಕಿ ಪಾರೆಮಜಲು ನಿಧನ

0

ನಾಲ್ಕೂರು ಗ್ರಾಮದ ಸಾಲ್ತಾಡಿ ಹೊಸಮನೆ ಎಂಬಲ್ಲಿಯ ಪಾರೇಮಜಲು ದಿ. ಕೂಸಪ್ಪ ಗೌಡರವರ ಧರ್ಮಪತ್ನಿ ಶ್ರೀಮತಿ ಜಾನಕಿಯವರು ಜೂ. 11 ರಂದು ಮುಂಜಾನೆ ನಿಧನರಾದರು.

ಅವರಿಗೆ 88 ವರ್ಷ ವಯಸ್ಸಾಗಿತ್ತು.

ಮೃತರು ನಾಟಿ ವೈದ್ಯೆಯಾಗಿದ್ದು ಹೆಣ್ಣು ಮಕ್ಕಳ ಬಾಣಂತಿ ನೋಡಿಕೊಳ್ಳುತ್ತಿದ್ದರು.

ಹಿಂದೆ ನಾಲ್ಕೂರು ಗ್ರಾಮ ಅರಣ್ಯ ಸಮಿತಿಯಿಂದ ಇವರನ್ನು ಗೌರವಿಸಲಾಗಿತ್ತು.

ಇವರು ಮಕ್ಕಳಾದ ಶ್ರೀಮತಿ ನೀಲಾವತಿ ಆನಂದ ಗೌಡ ಕಣಿಲೆಗುಂಡಿ. ಶ್ರೀಮತಿ ಧರ್ಮಾವತಿ ಚಂದ್ರಶೇಖರ ಪಾಲೇಪಾಡಿ, ಸೊಸೆ ಶ್ರೀಮತಿ ಮೋಹಿನಿ ರೋಹಿತಾಶ್ವ ಸೇರಿದಂತೆ ಮೊಮ್ಮಕ್ಕಳು, ಬಂಧುಗಳನ್ನು, ಕುಟುಂಬಸ್ಥರನ್ನು ಆಗಲಿದ್ದಾರೆ.

ವರದಿ : ಡಿ.ಹೆಚ್