ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಪ್ರಾಯೋಜಿತ ರೋಟರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ಇದರ 2026-27ನೇ ಸಾಲಿನ ವಿದ್ಯಾರ್ಥಿ ಪರಿಷತ್ ಚುನಾವಣೆ ಜೂ.17 ರಂದು ನಡೆಯಿತು.














6ನೇ ತರಗತಿಯ ಕು. ಪ್ರಾಪ್ತಿ ಎ. ಆರ್. ಅವರು ಶಾಲಾ ನಾಯಕ (SPL) ಆಗಿ ಹಾಗೂ 5ನೇ ತರಗತಿಯ ಮನಿತ್ ಬಿ. ಶಾಲಾ ಉಪನಾಯಕ (ASPL)ನಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷ ಹಾಗೂ ಮೇಜರ್ ಡೋನರ್ ರೋ.ಡಾ.ರಾಮಮೋಹನ್ ಕೆ. ಎನ್. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪ್ರಜಾಪ್ರಭುತ್ವದ ಮಹತ್ವ ಹಾಗೂ ಉತ್ತಮ ನಾಯಕರ ಗುಣಲಕ್ಷಣಗಳ ಬಗ್ಗೆ ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜ್ಯೋತ್ಸ್ನಾ ಕೆ. ಅವರು ವಿದ್ಯಾರ್ಥಿ ಪರಿಷತ್ತಿನ ಪಾತ್ರ ಮತ್ತು ಜವಾಬ್ದಾರಿಗಳ ಕುರಿತು ಮಾತನಾಡಿ, ವಿದ್ಯಾರ್ಥಿಗಳು ವಿವೇಕದಿಂದ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ಗೀತಾ ಎನ್.ಹಾಗೂ ಪದ್ಮನಾಭ ಕೊಯ್ನಾಡು ಅವರು ಸಂಘಟಿಸಿದ್ದರು. ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯಲು ಶಾಲೆಯ ಎಲ್ಲಾ ಸಿಬ್ಬಂದಿಯವರು ಸಹಕರಿಸಿದರು.







