ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಆನಂದ ಗುರೂಜಿ ಭೇಟಿ

0

ಧಾರ್ಮಿಕ ಮುಖಂಡ ಶ್ರೀ ಆನಂದ ಗುರೂಜಿ ಅವರು ಜೂ.17 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀ ದೇವಳದಲ್ಲಿ ದೇವರ ದರ್ಶನ ಮಾಡಿ ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು. ನಂತರ ಹೊಸಳ್ಳಿಗಮ್ಮ ದೈವದ ದರ್ಶನ ಮಾಡಿ, ಅಲ್ಲಿಂದ ಶ್ರೀ ದೇವಳದ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಏಸುರಾಜ್, ವ್ಯವಸ್ಥಾಪನ ಸಮಿತಿ ಸದಸ್ಯ ಲೀಲಾ ಮನಮೋಹನ್, ಹಾಗೂ ಶಿಷ್ಟಾಚಾರ ವಿಭಾಗದವರು ಆನಂದ ಗುರೂಜಿಯವರನ್ನು ಗೌರವಿಸಿದರು.