













ಕೋಟೆಮುಂಡುಗಾರು ಬಳಿಯ ತೋಟದಮೂಲೆ ಬಾಲಕೃಷ್ಣ ಗೌಡರು ದೀರ್ಘ ಕಾಲದ ಅಸೌಖ್ಯದಿಂದ ಜೂ. 18ರಂದು ತಮ್ಮ ಸಹೋದರ ದೇಜಪ್ಪ ಗೌಡ ಸೂರೆಂಗಿಯವರ ಮನೆಯಲ್ಲಿ ನಿಧನರಾದರು.
ಹಲವು ವರ್ಷಗಳ ಕಾಲ ಕೋಟೆಮುಂಡುಗಾರಿನಲ್ಲಿ ಅಂಗಡಿ ನಡೆಸುತ್ತಿದ್ದ ಇವರು ಪೈಂಟರ್ ಕೆಲಸವನ್ನೂ ಮಾಡುತ್ತಿದ್ದರು. ಬಾಲಕೃಷ್ಣ ಗೌಡರ ಪತ್ನಿ ನಿಧನರಾದ ಬಳಿಕ ಏಕಾಂಗಿಯಾಗಿದ್ದ ಇವರು ತಮ್ಮ ಹಿರಿಯ ಸಹೋದರ ದೇಜಪ್ಪ ಗೌಡರ ಮನೆಯಲ್ಲಿ ವಾಸವಾಗಿದ್ದರು. ಮೃತರು ಸಹೋದರ ದೇಜಪ್ಪ ಗೌಡ, ಇಬ್ಬರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.







