ಕೆವಿಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇಲ್ಲಿ ಶಾಲಾ ವಿದ್ಯಾರ್ಥಿ ಸರಕಾರದ ರಚನೆ ಜೂ.18 ರಂದು ನಡೆಯಿತು.














ಶಾಲಾ ನಾಯಕನಾಗಿ ಪುನೀತ್ ರಾಜ್. ಎಸ್, ಉಪ ನಾಯಕನಾಗಿ ಅಮೋಘ್. ಕೆ. ಎಲ್ , ಕಾರ್ಯದರ್ಶಿಯಾಗಿ ಹವಿಶ್ .ಸಿ ಆಯ್ಕೆಯಾದರು.
ಕ್ರೀಡಾಮಂತ್ರಿಯಾಗಿ ಬೃಂಧನ್, ಸ್ವಚ್ಚತಾ ಮಂತ್ರಿಯಾಗಿ ಕ್ಷಮಾ, ನೀರಾವರಿ ಮಂತ್ರಿಯಾಗಿ ಲೇಖನ್ .ಸಿ, ಕೃಷಿ ಮಂತ್ರಿಯಾಗಿ ಸ್ಕಂದ ಎಮ್. ಯು, ಸಾಂಸ್ಕೃತಿಕ ಮಂತ್ರಿಯಾಗಿ ಕೀರ್ತಿ, ಶಿಸ್ತು ಮಂತ್ರಿಯಾಗಿ ಆರಾಧ್ಯ.ಕೆ ಇವರು ಆಯ್ಕೆಯಾದರು. ವಿದ್ಯಾರ್ಥಿ ಚುನಾವಣೆಯ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಸುರೇಶ್ ಪಿ ಕೆ, ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ಗೌಡ,
ಸಹಶಿಕ್ಷಕರಾದ ಲೋಕನಾಥ ಗೌಡ, ಶ್ರೀಮತಿ ಸಂಧ್ಯಾರಾಣಿ, ರಾಜೇಶ್, ಚಂದ್ರು ಸಹಕರಿಸಿದರು.







