ಎಡಮಂಗಲ ಸ.ಹಿ.ಪ್ರಾ. ಶಾಲೆಯಲ್ಲಿ ನೋಟ್ ಬುಕ್ ವಿತರಣೆ

0

ಎಡಮಂಗಲ ಸ.ಹಿ.ಪ್ರಾ. ಶಾಲೆಯಲ್ಲಿ ನೋಟ್ ಬುಕ್ ವಿತರಣೆ ಜೂ. 18ರಂದು ನಡೆಯಿತು. 84 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ನ್ನು ಎಡಮಂಗಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಭವ್ಯಾ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶ್ರೀಮತಿ ಭವ್ಯಾರಿಗೆ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಭಾಸ್ಕರ್ ಆಚಾರ್ಯ, ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ರೈ, ಸುಳ್ಯ ಎಪಿಎಂಸಿ ಮಾಜಿ ಸದಸ್ಯ ವಿಶ್ವನಾಥ ಗೌಡ ಕಲ್ಲೆಂಬಿ, ಎಡಮಂಗಲ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮಣ್ಣ ಜಾಲ್ತಾರು, ಪ್ರಗತಿಪರ ಕೃಷಿಕರಾದ ಹಿರಿಯಣ್ಣ ಗೌಡ ದೋಳ್ತಿಲ, ಶಾಲಾ ಎಸ್.ಡಿ.ಎಂ.ಸಿ. ನಿಕಟಪೂರ್ವ ಅಧ್ಯಕ್ಷ ಶೀನಪ್ಪ ನಾಯ್ಕ ಮುಳಿಯ,ಪ್ರಗತಿಪರ ಕೃಷಿಕ ಚಂದ್ರಶೇಖರ್ ಮರಕ್ಕಡ, ನಿವೃತ್ತ ಮುಖ್ಯಶಿಕ್ಷಕರು ಚಿಕ್ಕಮ್ಮ ಟೀಚರ್ ಹೇಮಳ, ಶೇಖರ್‌ ಗೌಡ ಎರ್ಕ, ಎಲ್ಲಣ್ಣ ಗೌಡ, ದಾಮೋದರ ಗೌಡ ಲೆಕ್ಕೆಸಿರಿಮಜಲು, ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಕಲ್ಲೆಂಬಿ, ಶಾಂತಲಾ ಸ್ಟುಡಿಯೋ ಮಾಲಕರಾದ ಜಯರಾಮ ಸೇರಿದಂತೆ ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಊರಿನ ದಾನಿಗಳು, ಎಡಮಂಗಲ ಮತ್ತು ಎಣ್ಮೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಪದವೀಧರ ಶಿಕ್ಷಕಿ ಕು. ಪಲ್ಲವಿ ನೆರವೇರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಿ ಬಿ ಸ್ವಾಗತಿಸಿ, ಹಿರಿಯ ಶಿಕ್ಷಿಕಿ ಹಂಸಾವತಿ ವಂದಿಸಿದರು. ಪದವೀಧರ ಶಿಕ್ಷಕಿ ಕು. ಗಾಯತ್ರಿ ಶ್ರೀಮತಿ ಭವ್ಯರವರನ್ನು ಪರಿಚಯಿಸಿದರು.