ಸುಳ್ಯ :ವಿನುನಗರ ಲೇಔಟ್ ಅಳವಡಿಸಲಾಗಿದ್ದ ಗೇಟ್ ಅನ್ನು ತೆರವುಗೊಳಿಸಿದ ನಗರ ಪಂಚಾಯತ್ ಅಧಿಕಾರಿಗಳು

0

ಸುಳ್ಯದ ಓಡಬಾಯಿ ಬಳಿ ವಿನು ನಗರ ಲೇಔಟ್ ನ ಒಳಗೆ ಹೋಗುವ ರಸ್ತೆಗೆ ಅಳವಡಿಸಲಾಗಿದ್ದ ಗೇಟ್ ಅನ್ನು ಸುಳ್ಯ ನಗರ ಪಂಚಾಯತ್ ಅಧಿಕಾರಿಗಳು ಜೂನ್ 18 ರಂದು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಿಕೊಟ್ಟಿರುವ ಘಟನೆ ವರದಿಯಾಗಿದೆ.

ಐದು ವರ್ಷಗಳ ಹಿಂದೆ ವಿನು ನಗರ ಲೇಔಟ್ ನಲ್ಲಿ ರಸ್ತೆಬದಿಯ ಜಾಗ ಖರೀದಿಸಿದವರು ಮೊದಲಿದ್ದ ರಸ್ತೆಗೆ ಗೇಟನ್ನು ಅಳವಡಿಸಿದ್ದು , ಆ ಸಂದರ್ಭದಲ್ಲಿ ವಿನುನಗರದ ಇತರ ನಿವಾಸಿಗಳು ಇದನ್ನು ಪ್ರತಿಭಟಿಸಿದ್ದರು. ನ್ಯಾಯಾಲಯದಲ್ಲಿ ದಾವೆಯನ್ನೂ ಹೂಡಿದ್ದರು.

ಇದೀಗ ನಗರ ಪಂಚಾಯತ್ ಮುಖ್ಯಾಧಿಕಾರಿಯವರು ಸಿಬ್ಬಂದಿ ಜತೆ ಬಂದು ಗೇಟನ್ನು ತೆರೆವುಗೊಳಿಸಿದ್ದಾರೆ.
” ಆ ರಸ್ತೆ ಪಂಚಾಯತ್ ಗೆ ಬಿಟ್ಟುಕೊಟ್ಟ ರಸ್ತೆಯಾಗಿದ್ದು, ಗೇಟನ್ನು ತೆರವುಗೊಳಿಸುವಂತೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಗೆರಟು ತೆರವು ಮಾಡಿಕೊಡಲಾಗಿದೆ ” ಎಂದು ನ.ಪಂ. ಮುಖ್ಯಾಧಿಕಾರಿ ಬಸವರಾಜ್ ತಿಳಿಸಿದ್ದಾರೆ.