ಕೆರೆಗೆ ಬಿದ್ದು ಅವಳಿ ಮಕ್ಕಳ ಮೃತ್ಯು

0

ಮುರುಳ್ಯದ ಕಡೀರದಲ್ಲಿ ನಡೆದ ದುರ್ಘಟನೆ

ಮುರುಳ್ಯ ಗ್ರಾಮದ ಕಡೀರ ಎಂಬಲ್ಲಿ ಮನೆಯ ಸಮೀಪದ ಕೆರೆಗೆ ಬಿದ್ದು ಅವಳಿ ಮಕ್ಕಳು ಮೃತಪಟ್ಟ ದಾರುಣ ಘಟನೆ ಇಂದು ಸಂಜೆ ನಡೆದಿದೆ.

ಕಡೀರ ನಿವಾಸಿ , ವೆಲ್ಡಿಂಗ್ ಕೆಲಸ‌ ಮಾಡುವ ವಸಂತ ಎಂಬವರ ಮಕ್ಕಳಾದ ಜಶ್ವಿನ್ ಹಾಗೂ ಜಶ್ವಿನ್ ( ಐದೂವರೆ ವರ್ಷ ) ಮೃತರು.

ಸಂಜೆ ಆಟವಾಡುತ್ತಿದ್ದಾಗ ಮನೆಯ ಸಮೀಪವೇ ಇದ್ದ ಕೆರೆಗೆ ಆಕಸ್ಮಿಕವಾಗಿ ಬಿದ್ದರೆಂದು ತಿಳಿದು ಬಂದಿದೆ. ಸುಳ್ಯದಿಂದ ಅಗ್ನಿ ಶಾಮಕದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಬಂದ ಬಳಿಕ ಮೃತದೇಹ ಮೇಲೆತ್ತಲಾಯಿತು.

ಜಶ್ವಿನ್ ಮತ್ತು ಜಸ್ವಿತ್ ಮುರುಳ್ಯ ಶಾಂತಿನಗರ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿಗಳು.