ಸಹಕಾರಿ ಸಂಘದ ವತಿಯಿಂದ ಅಗ್ನಿವೀರ್ ಗೆ ಆಯ್ಕೆಯಾದ ಸ್ವಸ್ತಿಕ್ ಜೆ.ಎಸ್.ಗೆ ಸನ್ಮಾನ














ಐವರ್ನಾಡು ಗ್ರಾಮದ ನಿಸರ್ಗ ಕಾಲನಿಯಲ್ಲಿ ನೂತನವಾಗಿ ನಿರ್ಮಾಣವಾದ ಸಭಾಭವನದ ಉದ್ಘಾಟನೆ ಜೂ.22 ರಂದು ಬೆಳಿಗ್ಗೆ ಗಂಟೆ 10.00 ಕ್ಕೆನಡೆಯಲಿದೆ.
ಶಾಸಕಿ ಭಾಗೀರಥಿ ಮುರುಳ್ಯ ಸಭಾಭವನವನ್ನು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಲವು ಜನ ಗಣ್ಯರು ಉಪಸ್ಥಿತರಿರಲಿದ್ದಾರೆ.
ಬಳಿಕ 10.30 ಗಂಟೆಗೆ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಅಗ್ನಿವೀರ್ ಗೆ ಆಯ್ಕೆಯಾದ ಗ್ರಾಮದ ಜಬಳೆ ಸ್ವಸ್ತಿಕ್ ಜೆ.ಎಸ್.ಇವರಿಗೆ ಸನ್ಮಾನ ಕಾರ್ಯಕ್ರಮವು ಸಂಘದ ಸಭಾಭವನದಲ್ಲಿ ನಡೆಯಲಿದೆ.
ಶಾಸಕಿ ಭಾಗೀರಥಿ ಮುರುಳ್ಯ ಸನ್ಮಾನಿಸಲಿದ್ದಾರೆ.
ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಗೌರವ ಉಪಸ್ಥಿತರಾಗಿ ಹಿರಿಯರಾದ ಮೋಹನ್ ಕುಮಾರ್ ಪಾಲೆಪ್ಪಾಡಿ,ಸುಬ್ರಹ್ಮಣ್ಯ ಗೌಡ ಕುದುಂಗು ಉಪಸ್ಥಿತರಿರಲಿದ್ದಾರೆ.







