ನಿವೃತ್ತ ಶಿಕ್ಷಕರಿಗೆ ಸನ್ಮಾನ














ಕೊಡಿಯಾಲ ಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಅಧ್ಯಾಪಕರುಗಳಿಗೆ ಸನ್ಮಾನ ಹಾಗೂ ದಾನಿಗಳಿಂದ ವಿದ್ಯಾರ್ಥಿಗಳಿಗೆ ಕಲಿಕಾ ಪೂರಕ ಸಾಮಗ್ರಿ ವಿತರಣೆ ಕಾರ್ಯಕ್ರಮ ಜೂ 22.ರಂದು ಜರುಗಿತು..

ಕಾರ್ಯಕ್ರಮಡ ಅಧ್ಯಕ್ಷತೆಯ ನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಬೇಬಿ ಯವರು ವಹಿಸಿದ್ದರು. ಲಯನ್ಸ್ ಕ್ಲಬ್ ಸುಳ್ಯ ಇದರ ಮಾಜಿ ಅಧ್ಯಕ್ಷರಾದ ವೀರಪ್ಪ ಗೌಡ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ವಾರ್ಡ್ ಮಾಜಿ ಸದಸ್ಯರಾದ ಶ್ರೀಮತಿ ಮಮತಾ ಕುದ್ಪಾಜೆ,ಶ್ರೀ ವಿಷ್ಣು ಯುವಕಮಂಡಲದ ಅಧ್ಯಕ್ಷರಾದ ರಾಧಾಕೃಷ್ಣ ಬೆರ್ಪಡ್ಕ, ಸಂಗಮ ಹಿರಿಯ ವಿದ್ಯಾರ್ಥಿಸಂಘದ ಅಧ್ಯಕ್ಷರಾದ ಭೋಜಪ್ಪ ಗೌ ಡ ಮಾಣಿಬೆಟ್ಟು, ಎಸ್ ಡಿ ಎಂ ಸಿ ಮಾಜಿ ಸದಸ್ಯ ರಮೇಶ್ ಕೊಡೆಂಕೇರಿ,ನಿವೃತ್ತ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ಕೆ, ನಿವೃತ್ತ ಆರೋಗ್ಯ ಕಾರ್ಯಕರ್ತೆ ಶ್ರೀಮತಿ ರೇವತಿ,ಅಕ್ಷರಾದಶೋಹ ಸಿಬ್ಬಂದಿ ಶ್ರೀಮತಿ ಪ್ರೇಮ ವಿನಯಚಂದ್ರ ಹಾಗೂ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ ಮೊದಲಾದವರು ಉಪಸ್ಥಿತರಿದ್ದರು..

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು ನಿವೃತ್ತ ಶಿಕ್ಷಕಿ ಶ್ರೀಮತಿ ಗೀತಾ ಇವರನ್ನು ಶ್ರೀಮತಿ ಪುಷ್ಪಾವತಿ ಮಾಣಿಬೆಟ್ಟು ರವರು ಸನ್ಮಾನಿಸಿ ಶುಭ ಹಾರೈಸಿದರು. ಶ್ರೀಮತಿ ರೇವತಿ ಇವರನ್ನು ಶ್ರೀಮತಿ ಮಮತಾ ಕುದ್ಪಾಜೆ ಸನ್ಮಾನಿಸಿ ಶುಭಹಾರೈಸಿದರು. ಅಕ್ಷರ ದಾಶೋಹ ಸಿಬ್ಬಂದಿ ಶ್ರೀಮತಿ ಪ್ರೇಮ ವಿನಯಚಂದ್ರ ಇವರನ್ನು ಎಸ್ ಡಿ ಎಂ ಸಿ ಅಧ್ಯಕ್ಷರು ಶೇಮತಿ ಬೇಬಿ ಸನ್ಮಾನಿಸಿ ಶುಭಹಾರೈಸಿದರು.
ನಂತರ ದಾನಿಗಳಿಂದ ಕೊಡುಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಶ್ರೀ ವಿಷ್ಣು ಯುವಕ ತಂಡಲ ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕಾ ಪೂರಕ ಸಾಮಗ್ರಿ ಗಳನ್ನು ವಿತರಿಸಿದರು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಭೋಜಪ್ಪ ಗೌಡವರು ಊಟದ ತಟ್ಟೆಯನ್ನು ಕೊಡುಗೆ ನೀಡಿದರು. ರಮೇಶ್ ಕೊಡೆಂಕೇರಿ ರವರು 1ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಗುರುತಿನ ಕಾರ್ಡ್ ಮತ್ತು ಟೀ ಶರ್ಟ್ ಕೊಡುಗೆ ನೀಡಿದರು. ಮಹಿಳಾ ಸಮಾಜ ವತಿಯಿಂದ ಶ್ರೀಮತಿ ಹರಿಣಿ ಸದಾಶಿವ ಮತ್ತು ಪುಷ್ಪಾವತಿ ಮಾಣಿಬೆಟ್ಟು ಇವರು ಉಡುಪುಗಳನ್ನು ಕೊಡುಗೆ ನೀಡಿದರು. ಅಕ್ಷರ ದಾಸೋಹ ಸಿಬ್ಬಂದಿ ಶ್ರೀಮತಿ ಪ್ರೇಮರವರು ಒಂದು ಸಾವಿರ ರೂಪಾಯಿ ಮತ್ತು ಊಟ ಬಡಿಸುವ ಪಾತ್ರೆ ಕೊಡುಗೆ ನೀಡಿದರು. ಶ್ರೀಮತಿ ಗೀತಾ ನಿವೃತ್ತ ಶಿಕ್ಷಕಿ 5 ಸಾವಿರ ರೂಪಾಯಿ ಕೊಡುಗೆ ನೀಡಿದರು. ಶ್ರೀಮತಿ ಸವಿತಾ ಶಿಕ್ಷಕರರು 1ನೇ ತರಗತಿಗೆ ದಾಖಲಾತಿ ಹೊಂದುವ ವಿದ್ಯಾರ್ಥಿ ಗಳಿಗೆ ಒಂದು ಸಾವಿರ ರೂಪಾಯಿಯ ಎಫ್ ಡಿ ವಿತರಿಸಿದರು.
ಸೋಮಯ್ಯ ಗೌಡ, ಶ್ರೀಮತಿ ಪದ್ಮಾವತಿ, ಶ್ರೀಮತಿ ವಿಜಯಲಕ್ಷ್ಮಿ ಶ್ರೀಮತಿ ಹೊನ್ನಮ್ಮ ಕೆ ಇವರೆಲ್ಲರ ದತ್ತಿನಿಧಿ ಯನ್ನು ನೀಡಲಾಯಿತು. ಸಮನ್ವಯ ಅಧಿಕಾರಿ ಶ್ರೀಮತಿ ಶೀತಲ್ ಯು ಕೆ ಮತ್ತು ಶಿಕ್ಷಣ ಸoಯ್ಯೋಜಕರಾದ ಶ್ರೀಮತಿ ಧನಲಕ್ಷ್ಮೀ ಕುದ್ಪಾಜೆ ಕಾರ್ಯಕ್ರಮ ಕ್ಕೆ ಆಗಮಿಸಿ ಶುಭ ಹಾರೈಸಿದರು.
ರಮೇಶ್ ಕೆ ಪ್ರಾರ್ಥಿಸಿ, ಶಿಕ್ಷಕರುಗಳಾದ ಶ್ರೀಮತಿ ರೇಷ್ಮಾ ಕೆ ಸ್ವಾಗತಿಸಿ, ಶ್ರೀಮತಿ ಸವಿತಾ sdmc ಸದಸ್ಯರು ವಂದಿಸಿದರು, ಶ್ರೀಮತಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.







