ಆಸ್ಪತ್ರೆಗೆ ದಾಖಲು














ದೊಡ್ಡಡ್ಕ ಸಮೀಪ ಬೈಕ್ ಪಾದ ಚಾರಿಗೆ ಡಿಕ್ಕಿಯಾಗಿ ಪಾದಚಾರಿಯ ಕಾಲು ಮುರಿತಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜೂನ್ 22 ರಂದು ನಡೆದಿದೆ.
ಗಾಯಾಳು ದೊಡ್ಡಡ್ಕ ನಿವಾಸಿ ಗೋಪಾಲ ಎಂಬುವರಾಗಿದ್ದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಬೈಕ್ ಸವಾರ ಅರತೋಡಿನ ಪಿಂಡಿ ಮನೆ ನಿವಾಸಿ ಎಂದು ಹೇಳಲಾಗುತ್ತಿದ್ದು, ಗಾಯಾಳು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.







