ವಿದ್ಯಾಮಾತಾದ “ಮಾಥ್ಸ್ ಕ್ಲಬ್” ತರಬೇತಿಗೆ ಅಂತರಾಷ್ಟ್ರೀಯ ಚಾಂಪಿಯನ್ ಮಾನ್ಯತೆ

0

ಅಂತರಾಷ್ಟ್ರೀಯ ಚಾಂಪಿಯನ್ ಆಗಿ ಹೊರ ಹೊಮ್ಮಿದ ವಿದ್ಯಾರ್ಥಿಗಳು: Champion Of Champion ಆದ ಶಾರ್ಜಾದಲ್ಲಿ ನೆಲೆಸಿರುವ ಸುಳ್ಯದ ಐಶಾ ಬಶೀರ್ ಇಸ್ರ

ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮತ್ತು ಉದ್ಯೋಗ ಹಾಗೂ ಶಿಕ್ಷಣ ಕೌಶಲ್ಯಗಳ ಪ್ರತಿಷ್ಠಿತ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯು ಮಕ್ಕಳಲ್ಲಿರುವ ಮಾಥ್ಸ್ ಭಯವನ್ನು ಹೋಗಲಾಡಿಸಲು “Maths ಸಮಸ್ಯೆಗೆ ಬೇಕಾಗಿರುವುದು ಟ್ಯೂಷನ್ ಅಲ್ಲ ಸೊಲ್ಯೂಷನ್° ಎಂಬ ಘೋಷ ವಾಕ್ಯದಡಿಯಲ್ಲಿ 7 ವರ್ಷದಿಂದ 15 ವರ್ಷದ ವಿದ್ಯಾರ್ಥಿಗಳಿಗೆ Maths(ಗಣಿತ) ಅಂದರೆ ಭಯಗೊಳ್ಳುವವರಿಗೋಸ್ಕರ ಅತೀ ಸುಲಭದಲ್ಲಿ ಮಾಥ್ಸ್ ಟ್ರಿಕ್ಸ್ ಗಳನ್ನು Mind Game ಗಳ ಮೂಲಕ ಗಣಿತವನ್ನು ವಿವಿಧ ಚಟುವಟಿಕೆಗಳ ಮೂಲಕ ಆಸಕ್ತಿಯಿಂದ ಕಲಿಯಲು ಪ್ರೆರೇಪಿಸುವ “Maths Club”ನ್ನು ಪರಿಚಯಿಸಲಾಗಿತ್ತು.
7 ರಿಂದ 15 ವರ್ಷದ ತನಕದ ಮಕ್ಕಳಿಗೆ ವಾರದಲ್ಲಿ 2 ದಿನ ಸಂಜೆ 6 ರಿಂದ 7 ರವರೆಗೆ Online Live Class ಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ಪುತ್ತೂರು, ಸುಳ್ಯದಿಂದ ಹಿಡಿದು ಬೆಂಗಳೂರು ಅಲ್ಲದೇ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಅಂತಾರಾಷ್ಟ್ರೀಯ ಒಲಿಂಪಿಯಾಡ್ ನಲ್ಲಿ ವಿದ್ಯಾಮಾತಾದ ಈ ವಿಭಿನ್ನ ಪ್ರಯತ್ನದ “Maths Club” ಗೆ ಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿದ್ದು, ಮಾಥ್ಸ್ ಕ್ಲಬ್ ನ ತರಬೇತುದಾರೆ ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿ ಶ್ರೀಮತಿ ರಮ್ಯಾ ಭಾಗ್ಯೇಶ್ ರೈ ರವರಿಗೆ ಅತ್ಯುತ್ತಮ ತರಬೇತುದಾರೆ ಪ್ರಶಸ್ತಿ ಲಭಿಸಿದ್ದು, ಮಾಥ್ಸ್ ಕ್ಲಬ್ ನಲ್ಲಿ ತರಬೇತಿ ಪಡೆದುಕೊಂಡ 15 ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.


ಚಾಂಪಿಯನ್ ಆಗಿ ಹೊರ ಹೊಮ್ಮಿದ ವಿದ್ಯಾಮಾತಾದ ಹೆಮ್ಮೆಯ ವಿದ್ಯಾರ್ಥಿಗಳ ವಿವರ:

ಸುಳ್ಯ , ಆಲೆಟ್ಟಿ ನಿವಾಸಿ ಮಹಮ್ಮದ್ ಬಶೀರ್ ಮತ್ತು ಹಸೀನಾ ದಂಪತಿಗಳ ಪುತ್ರಿ ಸದ್ಯ ಜೆಮ್ಸ್ ಮಿಲೇನಿಯಂ ಶಾಲೆ ಶಾರ್ಜಾ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಐಶಾ ಬಶೀರ್ ಇಸ್ರ ಸುಳ್ಯ , ಗಾಂಧಿನಗರ ನಿವಾಸಿ ಅಬ್ದುಲ್ ರಶೀದ್ ಮತ್ತು ಅಸೀದ ದಂಪತಿಗಳ ಪುತ್ರಿ ಸದ್ಯ ಇಂಡಿಯನ್ ಸ್ಕೂಲ್ ಎ ಐ ವಾಡಿ ಇಲ್ಲಿ 4 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಫಿಯ ಆಯಿಷಾ,
ಸುಳ್ಯ, ಗಾಂಧಿನಗರ ನಿವಾಸಿ ಅಬ್ದುಲ್ ರಶೀದ್ ಮತ್ತು ಅಸೀದ ದಂಪತಿಗಳ ಪುತ್ರಿ ಸದ್ಯ ಇಂಡಿಯನ್ ಸ್ಕೂಲ್ ಎ ಐ ವಾಡಿ ಇಲ್ಲಿ 4 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಫಿಯಾ ನಫೀಸ
ಸುಳ್ಯ , ಆಲೆಟ್ಟಿ ನಿವಾಸಿ ಮಹಮ್ಮದ್ ಬಶೀರ್ ಮತ್ತು ಹಸೀನಾ ದಂಪತಿಗಳ ಪುತ್ರಿ ಸದ್ಯ ಜೆಮ್ಸ್ ಮಿಲೇನಿಯಂ ಶಾಲೆ ಶಾರ್ಜಾ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವ ಫಾತಿಮಾ ಬಶೀರ್,
ಮಂಗಳೂರಿನ, ಕೊಡಿಕಲ್ ನಿವಾಸಿ ಕಿರಣ್ ಕುಮಾರ್ ಮತ್ತು ಶ್ರೀಮತಿ ಮಲ್ಲಿಕಾ ದಂಪತಿಗಳ ಪುತ್ರ ಕೇಂದ್ರೀಯ ವಿದ್ಯಾಲಯ ಪಣಂಬೂರಿನಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಕೃತಿಕ್ ಕೆ ಕುಮಾರ್
ಬೆಂಗಳೂರಿನ ,ಹೊರಮಾವು ಇಲ್ಲಿ ವಾಸಿಸುತ್ತಿರುವ ಮಿಥುನ್ ಕೆ ಎಸ್ ಮತ್ತು ಶ್ರೀಮತಿ ಅಶ್ವಿತಾ ದಂಪತಿಗಳ ಪುತ್ರಿ ಸದ್ಯ ಇಂಟರ್ನ್ಯಾಷನಲ್ ಅಕಾಡೆಮಿ ಇಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಿಶ ಎಂ ಆಳ್ವ
ಬಂಟ್ವಾಳ, ಕಸಬ ಗ್ರಾಮದ ನಿವಾಸಿ ಕ್ಲಿಫರ್ಡ್ ವೇಗಸ್ ಮತ್ತು ಫ್ಲವಿಟ ಶೈನಿ ಪರ್ನಾಂಡೀಸ್
ದಂಪತಿಗಳ ಪುತ್ರಿ ಸದ್ಯ ಸುದಾನ ವಸತಿಯುತ ಶಾಲೆ, ಪುತ್ತೂರು ಇಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚ್ರಿಶಾ ವೇಗಸ್.
ಮೂಡುಬಿದ್ರೆ, ಬೆಲ್ವಾಯಿ ಗ್ರಾಮದ ಡಾ. ಈಶ್ವರ್ ಭಟ್ ಎಂ ಮತ್ತುಶ್ರೀಮತಿ ಗೌರಿ ಎನ್ ಜಿ ದಂಪತಿಗಳ ಪುತ್ರ ಸದ್ಯ ಎಕ್ಸಲೆಂಟ್ CBSE ಶಾಲೆ ಮೂಡುಬಿದ್ರೆ ಇಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾತ್ವಿಕ್ ಶರ್ಮಾ
ಪುತ್ತೂರು , ತೆಂಕಿಲ ಗ್ರಾಮದ ಅರುಣ್ ಕುಮಾರ್ ಮತ್ತು ಶ್ರೀಮತಿ ಜ್ಯೋತಿ ಲಕ್ಷ್ಮಿ ದಂಪತಿಗಳ ಪುತ್ರಿ ಸದ್ಯ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದಿವ್ಯ ಅರುಣ್ ಕುಮಾರ್
ಪುತ್ತೂರಿನ ಬನ್ನೂರು ಕಟ್ಟೆ ನಿವಾಸಿ ರಾಧಾಕೃಷ್ಣ ಗೌಡ ಮತ್ತು ಶ್ರೀಮತಿ ಸುಲೋಚನಿ ದಂಪತಿಗಳ ಪುತ್ರಿ ಸದ್ಯ GMUP ಶಾಲೆ ಹಾರಾಡಿ ಪುತ್ತೂರು ಇಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಜೀವಿತ ಆರ್
ಕಡಬ ತಾಲೂಕು, ಏನೇಕಲ್ಲು ಗ್ರಾಮದ ಚಂದ್ರಶೇಖರ ನಾಯರ್ ಮತ್ತುಶ್ರೀಮತಿ ಶ್ರೀಜಿಶಾ ದಂಪತಿಗಳ ಪುತ್ರಿ ಸದ್ಯ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಧ್ಯಾ ಸಿ
ಸುಳ್ಯದ ರಾಮಚಂದ್ರ ಕೆ ಮತ್ತು ಶ್ರೀಮತಿ ವನಿತಾ ಎಸ್ ದಂಪತಿಗಳ ಪುತ್ರ ಸದ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ, ಸುಳ್ಯ ಇಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಖುಷಿಕ್ ವಿ ಆರ್
ವಿಟ್ಲ ಸೇರಾಜೆಯಲ್ಲಿರುವ ಹರೀಶ ಎಸ್ ಮತ್ತು ಶ್ರೀಮತಿ ಶರ್ಮಿಳಾ ಎಂ ದಂಪತಿಗಳ ಪುತ್ರ ಸದ್ಯ ವಿಟ್ಲ ಜೆಸಿ
ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಶಾಂಕ್ ಎಚ್ ಎಸ್
ಮಂಗಳೂರಿನ ಪೆರ್ಮನ್ನೂರು ಗ್ರಾಮದ ಪ್ರಶಾಂತ್ ರೈ ಮತ್ತು ಶ್ರೀಮತಿ ಶೋಭಾ ರೈ ದಂಪತಿಗಳ ಪುತ್ರಿ ಸದ್ಯ ನಿತ್ಯಾದರ ಆಂಗ್ಲ ಮಾಧ್ಯಮ ಶಾಲೆ ಇಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯುಕ್ತ ಪಿ ರೈ
ಪುತ್ತೂರು ,ಆರ್ಯಾಪು ಗ್ರಾಮದ ಪ್ರಕಾಶ್ ಶೆಟ್ಟಿ ಮತ್ತು ಶ್ರೀಮತಿ ಪ್ರಿಯಾ ದಂಪತಿಗಳ ಪುತ್ರಿ ಸದ್ಯ ಸುದಾನ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಇಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸನ್ನಿಧಿ ಪಿ ಶೆಟ್ಟಿ.

2026-27ನೇ ಸಾಲಿನ ಮಾಥ್ಸ್ ಕ್ಲಬ್ ಗೆ ಜುಲೈ ತಿಂಗಳಿಂದ ತರಬೇತಿ ಪ್ರಾರಂಭವಾಗಲಿದ್ದು, ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿಗಾಗಿ APMC ರಸ್ತೆ ಪುತ್ತೂರು ಇಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಕಛೇರಿ ಸಂಖ್ಯೆ
99451 82516ನ್ನು ಸಂಪರ್ಕಿಸಲು ಸಂಸ್ಥೆ ತಿಳಿಸಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ತರಬೇತುದಾರರಾಗಿ ಮಾನ್ಯತೆ ಪಡೆಯುತ್ತಿರುವ ಶ್ರೀಮತಿ ರಮ್ಯಾ ಭಾಗ್ಯೇಶ್ ರೈ ರವರು ವಿದ್ಯಾಮಾತಾ ಅಕಾಡೆಮಿಯ ಯಶಸ್ಸಿನ ಹಿಂದೆ ಎಳೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವವರು, ಇವರು ವಿದ್ಯಾಮಾತಾ ಅಕಾಡೆಮಿಯ ಸ್ಥಾಪಕ ಶ್ರೀ ಭಾಗ್ಯೇಶ್ ರೈ ರವರ ಧರ್ಮಪತ್ನಿ ಇವರು ತನಗೆ ಒದಗಿ ಬಂದ ಸರಕಾರಿ ಹುದ್ದೆಯನ್ನು ತ್ಯಜಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ಇವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ 115 ವಿವಿಧ ಮನ್ನಣಾ ಪತ್ರ ದೊರಕಿದೆ.
ಶ್ರೀಮತಿ ರಮ್ಯಾ ಭಾಗ್ಯೇಶ್ ರೈ