ತಾಲೂಕಿನ 16 ಗ್ರಾ.ಪಂ.ಗಳಲ್ಲಿ ಮಳೆ ಮಾಪನ ಕೇಂದ್ರಗಳು ಸರಿಯಿಲ್ಲ : ಮುರುಳ್ಯದಲ್ಲಿ ಕೇಂದ್ರವೇ ಇಲ್ಲ

0

ಮಳೆ ಮಾಪನ ಕೇಂದ್ರಗಳ ಮೇಲ್ವಿಚಾರಣೆ ಕುರಿತು ತಾ.ಪಂ. ನಲ್ಲಿ ಸಭೆ

ಸ್ವಯಂ ಚಾಲಿತ ಹವಾಮಾನ ಕೇಂದ್ರಗಳ ಹಾಗೂ ಮಳೆ ಮಾಪನ ಕೇಂದ್ರಗಳ ಮೇಲ್ವಿಚಾರಣಾ ಸಮಿತಿಗಳ ಸಭೆಯು ಜೂ.23ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಶೀಲ್ದಾರ್ ಮಂಜುಳಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ಪ್ರಮೋದ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ‌ ಸುಹಾನ, ಗ್ರಾಮ ಪಂಚಾಯತಿ ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು ಸಭೆಯಲ್ಲಿದ್ದರು.

ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್ ರವರು ಮಾತನಾಡಿ “ಗ್ರಾಮ ಪಂಚಾಯತ್, ಸುಳ್ಯ ವ್ಯಾಪ್ತಿಯಲ್ಲಿ ಇರುವ ಮಳೆ ಮಾಪನ ಕೇಂದ್ರಗಳ ಪರಿಶೀಲನೆ ನಡೆಸಲಾಗಿದೆ. 12 ಕಡೆಗಳಲ್ಲಿ ಮೇಲ್ನೋಟಕ್ಕೆ ಮಳೆ ಮಾಪನ‌ ಕೇಂದ್ರ ಸರಿಯಾಗಿರುವುದಾಗಿ ಕಂಡು ಬಂದಿದೆ. 16 ಗಂಟೆಗಳಲ್ಲಿ ಬೇರೆ ಬೇರೆ ದುರಸ್ತಿ ಕಾರ್ಯಗಳು ನಡೆಯಬೇಕಾಗಿದೆ. ಆದರೆ ಇವೆಲ್ಲದರ ತಾಂತ್ರಿಕ ವರದಿ ಇನ್ನಷ್ಟೇ ಸಿಗಬೇಕಾಗಿದೆ. ಈ ಬಾರಿ ಸ್ಪಟಿಕ ಕಂಪೆನಿಯವರು ಇದರ ಉಸ್ತುವಾರಿ ವಹಿಸಿಕೊಂಡಿದ್ದು ಅವರು ಸರಿಪಡಿಸಬೇಕಾಗಿದೆ. ಅವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ” ಎಂದು ಹೇಳಿದರು.

ಬಳಿಕ ಮಾತನಾಡಿದ ತಹಶೀಲ್ದಾರ್ ಮಂಜುಳಾರವರು, ಮಳೆ ಮಾಪನ ಕೇಂದ್ರಗಳನ್ನು ಪ್ರತೀ ವಾರಕ್ಕೊಮ್ಮೆ ಪಂಚಾಯತ್ ನವರು ಹಾಗೂ ವಿ.ಎ.ಯವರು ಪರಿಶೀಲಿಸಬೇಕು. ಮಾಪನ ಕೇಂದ್ರದ ಮೇಲೆ ಮಳೆ ಬೀಳಲು ಯಾವುದೇ ಅಡಚಣೆ ಆಗದಂತೆ ವರ್ಕಿಂಗ್ ಕಂಡೀಷನ್ ನಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಆಲೆಟ್ಟಿ ವಿ.ಎ. ಶರತ್ ರವರು “ಆಲೆಟ್ಟಿಯ ಮಳೆ ಮಾಪನ ಕೇಂದ್ರ ವರ್ಕಿಂಗ್ ನಲ್ಲಿದೆಯೋ ಎಂಬ ಕುರಿತು ನಮಗೆ ಇನ್ನೂ ಸ್ಪಟಿಕ ಕಂಪನಿಯವರಿಂದ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ದೂರಿಕೊಂಡರೆ, ಸೃಜನ್ ರವರು ಕೂಡಾ ಇದೇ ರೀತಿಯಾಗಿ ಹೇಳಿದರು. ಉಬರಡ್ಕ‌ಮಿತ್ತೂರು ಪಂಚಾಯತ್ ನಲ್ಲಿಯೂ ಮಳೆಮಾಪನ ದುರಸ್ತಿ ಮಾಡಿಲ್ಲ ಎಂದು ಪಿಡಿಒ ರವೀಂದ್ರ ಮಾಹಿತಿ ನೀಡಿದರು. ನಾವು ಫೆಬ್ರವರಿಯಲ್ಲಿ ಅರ್ಜಿಕೊಟ್ಟರೂ ಇನ್ನೂ ಮಾಪನ ಕೇಂದ್ರ ಇನ್ ಸ್ಟಾಲ್ ಮಾಡಿಲ್ಲ ಎಂದು ಪಿಡಿಒ ಒಬ್ಬರು ಅಹವಾಲು ಸಲ್ಲಿಸಿದರು. “ನಮ್ಮ ನಮ್ಮ ಗ್ರಾಮದಲ್ಲಿ ಎಷ್ಟು ಮಳೆ ಆಗುತ್ತದೆ ಎಂಬ ಕುರಿತು ವರದಿ ನಮಗೆ ಸಿಗುತ್ತಿಲ್ಲ ಎಂದು ಅರಂತೋಡು ಗ್ರಾ.ಪಂ. ಪಿಡಿಒ‌ ಜಯಪ್ರಕಾಶ್ ಹೇಳಿದರು.

ಸಭೆಯಲ್ಲಿ ಆದ ಚರ್ಚೆಗಳ ಕುರಿತು ಸ್ಪಟಿಕ ಕಂಪೆನಿ ಯವರಿಗೆ ಬರೆದು ಎಲ್ಲ‌ಮಾಪನ‌ಕೇಂದ್ರ ಚಾಲನೆಯಾಗುವಂತೆ ಮಾಡಲು ಸೂಚನೆ ನೀಡುವುದಾಗಿ ತಹಶೀಲ್ದಾರ್ ಹೇಳಿದರು.