














ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದುಗಲಡ್ಕ ಸೋಣಂಗಿರಿ ಒಕ್ಕೂಟದ ವತಿಯಿಂದ ಜರುಗಿದ ಕೊಯಿಕುಳಿ ಸ.ಹಿ.ಪ್ರಾ.ಶಾಲೆಯ ಆವರಣದಲ್ಲಿನ ಸ್ವಚ್ಛತೆ ಮತ್ತು ಶ್ರಮದಾನ ಕಾರ್ಯಕ್ರಮವು ಮೇಲ್ವಿಚಾರಕರಾದ ಶ್ರೀಮತಿ ಜಯಶ್ರೀ ಮತ್ತು ಸೇವಾ ಪ್ರತಿನಿಧಿ ಶ್ರೀಮತಿ ಸೌಮ್ಯ ಒಕ್ಕೂಟದ ಅಧ್ಯಕ್ಷರಾದ ಗಿರಿಧರ ಗೌಡ ನಾಯರ್ಹಿತ್ತಲ್ ಇವರ ನಿರ್ದೇಶನದಲ್ಲಿ ಜರುಗಿತು ಶ್ರಮದಾನವನ್ನು ದೀಪ ಪ್ರಜ್ವಲಿಸುವುದರ ಮೂಲಕ ಸುರೇಶ್ ಭಟ್ ಕಮಿಲಡ್ಕ ಉದ್ಘಾಟಿಸಿ ಶುಭ ಹಾರೈಸಿ ಶ್ರಮದಾನಕ್ಕೆ ಚಾಲನೆಯನ್ನು ನೀಡಿದರು. ಮಾಜಿ ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೀಲಾವತಿ ಮಾಧವ, ಸೇವಾ ಪ್ರತಿನಿಧಿ ಶ್ರೀಮತಿ ಸೌಮ್ಯ ಕೊಯಿಕುಳಿ ಉಪಸ್ಥಿತರಿದ್ದು ಶಾಲಾ ಮುಖ್ಯೋಪಾಧ್ಯಾಯರಾದ ಬೆಳ್ಯಪ್ಪ ಕೋಡ್ತುಗುಳಿ ಸ್ವಾಗತಿಸಿದರು.

ಶ್ರಮದಾನದಲ್ಲಿ ಒಕ್ಕೂಟದ ಸದಸ್ಯರೊಂದಿಗೆ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಕಮಲಾಕ್ಷಿ, ಸದಸ್ಯರು, ಪೋಷಕರು ಮುಖ್ಯೋಪಾಧ್ಯಾಯರು ಶಿಕ್ಷಕರು ಅಡುಗೆ ಸಿಬ್ಬಂದಿಗಳು ಭಾಗವಹಿಸಿದರು
ಶ್ರಮದಾನದಲ್ಲಿ ವಿಶೇಷವಾಗಿ ಗಿಡಗಳನ್ನು ಕಟಿಂಗ್ ಮಾಡುವ ಯಂತ್ರದೊಂದಿಗೆ ಸಹಕರಿಸಿದ ಸಂಜೀವ ಬಾಜಿನಡ್ಕ ಮತ್ತು ಮನೆಯವರು, ಶ್ರೀಮತಿ ಶೀಲಾವತಿ ಮಾಧವ ಮತ್ತು ಮನೆಯವರು, ಶ್ರೀಮತಿ ಪ್ರಮೀಳಾ ಮತ್ತು ಮನೆಯವರು, ಮಧ್ಯಾಹ್ನದ ಭೋಜನಕ್ಕೆ ತೆಂಗಿನಕಾಯಿ ಶ್ರೀಮತಿ ತುಳಸಿ ಜಯರಾಮ, ರಾಮ ಕೃಷ್ಣಭಟ್ ನಡುಮನೆ , ತರಕಾರಿ ಶ್ರೀಮತಿ ಕಮಲಾಕ್ಷಿ, ಶ್ರೀಮತಿ ಹರಿಣಾಕ್ಷಿ, ಸಿಹಿತಿಂಡಿ ನೀಡಿ ಸಹಕರಿಸಿದರು.







