ಆಲೆಟ್ಟಿ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವ ಭಾವಿ ಸಮಾಲೋಚನಾ ಸಭೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಪುನ: ಪ್ರತಿಷ್ಠಾಷ್ಠಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ಜೂ.27 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ‌ಸಮಿತಿ ಅಧ್ಯಕ್ಷ ಗಿರೀಶ್ ನಾರ್ಕೋಡು ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಬ್ರಹ್ಮಕಲಶೋತ್ಸವವನ್ನು ನಡೆಸುವ ಬಗ್ಗೆ ದೈವಜ್ಞರ ಮುಖೇನ ಪ್ರಶ್ನಾ ಚಿಂತನೆಯನ್ನು ಇರಿಸಲಾಗಿದ್ದು ಕುಂಟಾರು ಕ್ಷೇತ್ರದ ರವೀಶ್ ತಂತ್ರಿಯವರ ನಿರ್ದೇಶನದಂತೆ 2026 ರ ಡಿಸೆಂಬರ್ ತಿಂಗಳಲ್ಲಿ ನಡೆಸುವುದಾಗಿ ಈ ಬಗ್ಗೆ ತಂತ್ರಿಯವರನ್ನು ಭೇಟಿಯಾಗಿ ದಿನ ನಿಗದಿ ಪಡಿಸುವುದು. ಬಳಿಕ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸುವ ಬಗ್ಗೆ ನಿರ್ಧರಿಸಲಾಯಿತು. ಮುಂದಿನ ದಿನಗಳಲ್ಲಿ ವರಮಹಾಲಕ್ಷ್ಮೀ ಪೂಜೆ ಮತ್ತು ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.


ಈ ಸಂದರ್ಭದಲ್ಲಿ ಅನುವಂಶಿಕ ಮೊಕ್ತೇಸರರಾದ ಹೇಮಚಂದ್ರ ಬೈಪಡಿತ್ತಾಯ, ಶ್ರೀಪತಿ ಬೈಪಡಿತ್ತಾಯ, ಜಯಪ್ರಕಾಶ್ ಬೈಪಡಿತ್ತಾಯ, ಗಗನ್ ಬೈಪಡಿತ್ತಾಯ, ಅರ್ಚಕರಾದ ಹರ್ಷಿತ್ ಬನ್ನಿಂತಾಯ, ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷಎನ್.ಎ.ರಾಮಚಂದ್ರ, ಆರ್ಥಿಕ ಸಮಿತಿ ಸಂಚಾಲಕ ಜಯಪ್ರಕಾಶ್ ಕುಂಚಡ್ಕ, ನಿಕಟ ಪೂರ್ವಾಧ್ಯಕ್ಷ ಪ್ರಸನ್ನ ಕೆ.ಸಿ ಬಡ್ಡಡ್ಕ, ರತ್ನಾಕರ ಗೌಡ ಕುಡೆಕಲ್ಲು,ಸೇವಾ ಸಮಿತಿ ಅಧ್ಯಕ್ಷಪುರುಷೋತ್ತಮ ಕೋಲ್ಚಾರು, ಸದಸ್ಯರಾದ ಜಗದೀಶ್ ಅರಂಬೂರು, ಸತೀಶ್ಚಂದ್ರ ಕಲ್ಲೆಂಬಿ, ನವೀನ್ ಕುಮಾರ್ ಗುಂಡ್ಯ, ವಿಜಯಕುಮಾರ್ ಆಲೆಟ್ಟಿ, ಕಮಲಾಕ್ಷ ಕೊಯಿಂಗಾಜೆ, ವನಜಾಕ್ಷಿ ಆಲೆಟ್ಟಿ ಹಾಗೂ ಸ್ಥಳಿಯರಾದ ಸುಧಾಕರ ಆಲೆಟ್ಟಿ, ಉದಯ ಕುಡೆಕಲ್ಲು,ಲಕ್ಷ್ಮಣ ಗೌಡ ಪರಿವಾರ,ನಾರಾಯಣ ಪರಿವಾರಕಾನ, ಚಂದ್ರಕಾಂತ ನಾರ್ಕೋಡು, ದಯಾನಂದ ಪಾತಿಕಲ್ಲು, ಪುರುಷೋತ್ತಮ ದೋಣಿಮೂಲೆ, ಮಹಾಬಲ ರೈ ಆಲೆಟ್ಟಿ, ಗೋವಿಂದ ಭಟ್ ಎಲಿಕ್ಕಳ, ನಾರಾಯಣ ರೈ ಆಲೆಟ್ಟಿ, ಸತೀಶ್ ಕುಲಾಲ್ ಆಲೆಟ್ಟಿ,
ರಾಮಚಂದ್ರ ಬಾಳೆಹಿತ್ಲು, ರಾಮಚಂದ್ರ ಆಲೆಟ್ಟಿ, ಜನಾರ್ದನ ಗೌಡ ಗುಂಡ್ಯ, ನಂಜುಂಡ ದೇವಸ್ಯ, ದಯಾನಂದ ಪತ್ತುಕುಂಜ, ಶ್ರೀನಾಥ್ ಆಲೆಟ್ಟಿ,
ಸತೀಶ್ ಕುಂಭಕೋಡು, ವೈಕುಂಠ ನಾಯಕ್ ದೋಣಿಮೂಲೆ, ಧರ್ಮ ಪಾಲ ಕೊಯಿಂಗಾಜೆ, ಚಿದಾನಂದ ಗೌಡ ನೂಜಿನಮೂಲೆ, ಅಜಿತ್ ಗುಂಡ್ಯ, ಜಲಜಾಕ್ಷಿ ರೈ ಆಲೆಟ್ಟಿ, ಗಣೇಶ ಆಲೆಟ್ಟಿ, ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.