ಬಿಜೆಪಿ ಜಿಲ್ಲಾ ಕಾನೂನು ಪ್ರಕೋಷ್ಠದ ಸದಸ್ಯರಾಗಿ ಸಂದೀಪ್ ವಳಲಂಬೆ

0

ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾನೂನು ಪ್ರಕೋಷ್ಠದ ಸದಸ್ಯರಾಗಿ ಸಂದೀಪ್ ವಳಲಂಬೆ ಆಯ್ಕೆಯಾಗಿದ್ದಾರೆ.

ಜೂ.26 ರಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಕಛೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಘೋಷಣೆ ಮಾಡಲಾಯಿತು.

ಸುಳ್ಯದಲ್ಲಿ ನ್ಯಾಯವಾದಿ ಯಾಗಿರುವ ಸಂದೀಪ್ ವಳಲಂಬೆಯವರು ಗುತ್ತಿಗಾರು ಗ್ರಾಮದ ವಳಲಂಬೆಯ ಮೊಟ್ಟೆ ಎಂಬಲ್ಲಿ ವಾಸವಾಗಿರುವ ಚಂದ್ರಶೇಖರ್ ಮತ್ತು ಶ್ರೀಮತಿ ಕಲಾವತಿಯವರ ಪುತ್ರ.