













ಕನಕಮಜಲು ಗ್ರಾಮದ ಕಾರಿಂಜ ರುಕ್ಮಯ್ಯ ಗೌಡ ಕಾರಿಂಜ ಇವರು ಅಲ್ಪಾವಧಿ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು. ಅನಾರೋಗ್ಯದಿoದ ಸುಳ್ಯ ದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಕೇಶವ ಗೌಡ, ಲವಕುಮಾರ್ ಗೌಡ,ಹರೀಶ ಗೌಡ, ಪುತ್ರಿ ಶ್ರೀ ಮತಿ ಸಾವಿತ್ರಿ, ಶ್ರೀ ಮತಿ ಧಮಯಂತಿ, ಶ್ರೀಮತಿ ಚಿತ್ರಕಲಾ ,ಅಳಿಯಂದಿರು, ಸೊಸೆಯಂದಿರನ್ನು ಮತ್ತು ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ,ಬಂಧು ಮಿತ್ರರನ್ನು ಅಗಲಿದ್ದಾರೆ.







