ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಪ್ರೌಢಶಾಲಾ ವಿಭಾಗದಲ್ಲಿ ಮಾದಕ ದ್ರವ್ಯ ನಿರ್ಮೂಲನಾ ದಿನಾಚರಣೆ ಪ್ರಯುಕ್ತ ಎನ್ ಎಸ್ ಎಸ್ ಘಟಕದ ವತಿಯಿಂದ ಮ್ಯಾರಥಾನ್ ಓಟ ಜೂ. 27 ರಂದು ಏರ್ಪಡಿಸಲಾಯಿತು.














ಕಾರ್ಯಕ್ರಮದ ನೇತೃತ್ವವನ್ನು ಯೋಜನಾಧಿಕಾರಿ ಶ್ರೀಮತಿ ಪದ್ಮಿನಿ.ಪಿ ವಹಿಸಿದ್ದರು.
ಮುಖ್ಯ ಶಿಕ್ಷಕಿ ಶ್ರೀಮತಿ ಜ್ಯೋತಿ ಲಕ್ಷ್ಮಿ, ಶಿಕ್ಷಕರಾದ ಶ್ರೀಮತಿ ಯಶ್ವಿನಿ, ಶ್ರೀಮತಿ ಶೈನಿ, ಶ್ರೀಮತಿ ಯಮುನಾ, ಇಬ್ರಾಹಿಂ, ಚಿನ್ನಪ್ಪ ಗೌಡ ಭಾಗವಹಿಸಿದ್ದರು.
3 ಕಿ.ಮೀ ಮ್ಯಾರಥನ್ ಓಟದಲ್ಲಿ
ಹುಡುಗರ ವಿಭಾಗದಲ್ಲಿ ಸಿರಾಜುದ್ದೀನ್ 9ನೇ ತರಗತಿ ಪ್ರಥಮ ಸ್ಥಾನವನ್ನು, ಅಬುತಾಹಿರ್ ಹತ್ತನೇ ತರಗತಿ ದ್ವಿತೀಯ ಸ್ಥಾನ ಗಳಿಸಿದರು.
ಹುಡುಗಿಯರ ವಿಭಾಗದಲ್ಲಿ 10ನೇ ತರಗತಿಯ ಮೋಹಿತ ಪ್ರಥಮ ಸ್ಥಾನ, ಲಕ್ಷ್ಮಿ ಎಂಟನೇ ತರಗತಿ ದ್ವಿತೀಯ ಸ್ಥಾನಗಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಎನ್ ಎಸ್ ಎಸ್ ಘಟಕದ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು.







