ಸುಳ್ಯ ರೋಟರಿ ಕ್ಲಬ್ ನ 2026 -27 ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಲತಾ ಮಧುಸೂದನ್ ರವರು ಆಯ್ಕೆಯಾಗಿದ್ದು ನೂತನ ತಂಡದ ಪದಗ್ರಹಣ ಕಾರ್ಯಕ್ರಮವು ಜು.01 ರಂದು ಸಂಜೆ ಸುಳ್ಯ ರಥಬೀದಿ ರೋಟರಿ ಕಮ್ಯುನಿಟಿ ಹಾಲ್ ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷೆ ಲತಾಮಧುಸೂದನ್ ರವರು ಜೂ.27 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.














ಸಂಜೆ 6.30 ಕ್ಕೆ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ರೋ.ದತ್ತಾತ್ರೇಯ ರಾವ್ ರವರು ಪದಗ್ರಹಣ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದಿನ ಡಿಸ್ಟ್ರಿಕ್ ಗವರ್ನರ್ ರೋ.ವಿಕ್ರಮ್ ದತ್ತರವರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಪದಗ್ರಹಣದ ಸಂದರ್ಭದಲ್ಲಿ ಪಿಯುಸಿಯ ಅಕಾಡೆಮಿಕ್ ಟಾಪರ್ ಗಳನ್ನು ಗೌರವಿಸಲಾಗುವುದು. ಪೆರುವಾಜೆಯ ನಾಟಿವೈದ್ಯೆ ಯಶೋಧರವರನ್ನು ಮತ್ತು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಲೈನ್ ಮೆನ್ ಸಂತೋಷ್ ರವರನ್ನು ಸನ್ಮಾನಿಸಲಾಗುವುದು. ಡಿಸ್ಡ್ರಿಕ್ ಪ್ರೊಜೆಕ್ಟ್ 2026 – 27 ರಂತೆ ಆರೋಗ್ಯ,ಜೀವನ್ ರಕ್ಷಾ, (CPR) ಬ್ಲಡ್ ಕ್ಯಾಂಪ್ , ಎಜುಕೇಶನ್,ರೋಡ್ ಸೇಫ್ಟಿ,ಟ್ರಾಫಿಕ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ,ಪರಿಸರ ಸ್ಬಚ್ಛತೆ,ನೀರಿನ ಸಂರಕ್ಷಣೆ,ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡುವುದು.
ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮ ಹಾಗು ಶಾಶ್ವತ ಯೋಜನೆಗಳ ಬಗ್ಗೆಯೂ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಹೇಳಿದರು. ಹಾಗೂ ಇನ್ನಿತರ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಅಸಿಸ್ಟೆಂಟ್ ಗವರ್ನರ್ ರೋ.ಆನಂದ ಖಂಡಿಗ, ಐ.ಪಿ.ಪಿ.ಡಾ.ರಾಮಮೋಹನ್ ರೋ.ಗಣೇಶ್ ಭಟ್, ರೋ.ಆಗ್ರೋ ರಾಮಚಂದ್ರ ಖಜಾಂಜಿ ಶ್ರೀಮತಿ ನಳಿನಿ ಕಿರ್ಲಾಯ ಉಪಸ್ಥಿತರಿದ್ದರು.
ರೋಟರಿ ಕಾರ್ಯದರ್ಶಿ ರೋ.ಹರಿರಾಯ ಕಾಮತ್ ವಂದಿಸಿದರು. ಪತ್ರಿಕಾಗೋಷ್ಟಿಯಲ್ಲಿ ರೊ.ಪದಾಧಿಕಾರಿಗಳು ಉಪಸ್ಥಿತರಿದ್ದರು.







