ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪಾನತ್ತಿಲ ರಾಘವ ಗೌಡ ನಿಧನ

0

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಭಾಜಪದ ಹಿರಿಯ ಮುಖಂಡರಾದ ರಾಘವ ಗೌಡ ಪಾನತ್ತಿಲ ಇಂದು( ಜೂ.28) ಸಂಜೆ ನಿಧನರಾದರು. ಕೆಲವು ವರುಷಗಳಿಂದ ಅನಾರೋಗ್ಯಕ್ಕೊಳಗಾಗಿ ಸಾಮಾಜಿಕ ಚಟುವಟಿಕೆಗಳಿಂದ ದೂರ ಇದ್ದರು.ಅವರಿಗೆ 72 ವರ್ಷ ವಯಸ್ಸಾಗಿತ್ತು.
ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ 5 ವರ್ಷ ಸೇವೆ ಸಲ್ಲಿಸಿದ್ದರು. ಭಾಜಪ ಗ್ರಾಮ ಸಮಿತಿಯ ಅಧ್ಯಕ್ಷರಾಗಿ, ತಾಲೂಕು ಸಮಿತಿಯ ಪದಾಧಿಕಾರಿಯಾಗಿಯೂ ದುಡಿದಿದ್ದರು. ದುಗ್ಗಲಡ್ಕದ ಮಿತ್ರ ಯುವಕ ಮಂಡಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೊಯಿಕುಳಿ ಹಿ.ಪ್ರಾ.ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ದುಡಿದಿದ್ದರು.


ಮೃತರು ಪತ್ನಿ ಪದ್ಮಿನಿ, ಪುತ್ರ ಅನಿಲ್,ಪುತ್ರಿ ಅನಿತಾಕಿರಣ್ ನೆಕ್ಕಿಲ, ಸೊಸೆ, ಮೊಮ್ಮಕ್ಕಳು, ಓರ್ವ ಸಹೋದರ ಮತ್ತು ಆರು ಮಂದಿ ಸಹೋದರಿಯರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.