
ಸುಬ್ರಹ್ಮಣ್ಯದ ಕೆ ಎಸ್ ಎಸ್ ಕಾಲೇಜಿನ ಎದುರುಗಡೆ ಇರುವ ಸುಶ್ರೀ ವಾಣಿಜ್ಯ ಕಟ್ಟಡದಲ್ಲಿ ಮಹೋದಯ ಕೋಚಿಂಗ್ ಸೆಂಟರ್ ಜೂ.28 ರಂದು ಉದ್ಘಾಟನೆಗೊಂಡಿತು.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಆಂಜನೇಯ ರೆಡ್ಡಿ ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೂ ಅದರ ಸಂಪೂರ್ಣ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪ್ರಾಧ್ಯಾಪಕ ಡಾlಎ.ಎ ತಿಲಕ್ ಅವರು ಕೋಚಿಂಗ್ ಸೆಂಟರ್ ನ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಲಿ ಎಂದು ಶುಭ ಹಾರೈಸಿದರು.















ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಚಿಂಗ್ ಸೆಂಟರ್ ಸ್ಥಾಪಕರಾದ ಚಂದ್ರಶೇಖರ್ ಜಿ. ಎನ್ ವಹಿಸಿ ಕೋಚಿಂಗ್ ಸೆಂಟರ್ ನಲ್ಲಿ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಎಲ್ಲಾ ವಿಷಯಗಳಿಗೆ ಕೋಚಿಂಗ್ ನೀಡಲಾಗುವುದು. ನವೋದಯ, ಪಿಯುಸಿ, ಸಿಇಟಿ,ತರಬೇತಿ, ಕೆ.ಪಿ.ಎಸ್. ಇ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದೆಂದು ತಿಳಿಸಿರುವರು. ಕೋಚಿಂಗ್ ಸೆಂಟರ್ ಶಿಕ್ಷಕಿ ವಾಣಿ ಸ್ವಾಗತಿಸಿದರು. ವಿದ್ಯಾರ್ಥಿನಿ ಅಭಿಜ್ಞಾ ಕಾರ್ಯಕ್ರಮ ನಿರೂಪಿಸಿದರು.

ಇಲ್ಲಿ ಪ್ರತಿದಿನ ಸಂಜೆ ಒಂದರಿಂದ ಹತ್ತನೇ ತರಗತಿ ವರೆಗೆ ಐದು ಗಂಟೆಯಿಂದ ಏಳು ಗಂಟೆವರೆಗೆ ಕೋಚಿಂಗ್ ನಡೆಯಲಿದೆ. ಪ್ರತಿ ಶನಿವಾರ ಅಪರಾಹ್ನ ಗಂಟೆ ನಾಲ್ಕರಿಂದ ಆರು ಗಂಟೆ ತನಕ ನೃತ್ಯ ತರಭೇತಿ ನಡೆಯಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಪ್ರತಿ ದಿನ ಬೆಳಗ್ಗೆ ಎರೋಬಿಕ್ ಕ್ಲಾಸ್ ಆರಂಭಿಸಲಾಗುವುದು ಎಂದು ಸಂಸ್ಥೆಯವರು ತಿಳಿಸಿದ್ದಾರೆ.







