ಕೆ.ವಿ.ಜಿ ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್

0
                                 

ಕೆ.ವಿ.ಜಿ ಇ೦ಜಿನಿಯರಿ೦ಗ್ ಕಾಲೇಜು, ಸುಳ್ಯ ಇದರ ವತಿಯಿಂದ ನಡೆಸಿದ
iWave ಕಂಪೆನಿಯ ಸಂದರ್ಶನದಲ್ಲಿ ೨೦೨೬ನೇ ಸಾಲಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಲಿಖಿತ್ ಕೆ.ಆರ್ ಮತ್ತು ಮೌಸೀನಾ ತಸ್ಲೀಮ್ ಆಯ್ಕೆಯಾಗಿರುತ್ತಾರೆ. ಇವರಿಗೆ ಕಂಪೆನಿಯಿಂದ ರೂ. 4.8 ಲಕ್ಷ ವಾರ್ಷಿಕ ವೇತನ ಇದೆಯೆಂದು ಕಂಪೆನಿ ತಿಳಿಸಿದೆ.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಕಮಿಟಿ ಬಿ ಇದರ ಅಧ್ಯಕ್ಷರಾಗಿರುವ ಡಾ. ರೇಣುಕಾಪ್ರಸಾದ್ ಕೆ.ವಿ., ಸೆಕ್ರೆಟರಿ, ಎ.ಒ.ಎಲ್.ಇ(ರಿ) ಕಮಿಟಿ ಬಿ ಡಾ. ಜ್ಯೋತಿ ಆರ್. ಪ್ರಸಾದ್, ಡೈರೆಕ್ಟರ್ ಎ.ಒ.ಎಲ್.ಇ.(ರಿ) ಕಮಿಟಿ ಬಿ ಡಾ. ಅಭಿಜ್ಞ ಕೆ.ಆರ್., ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಮೌರ್ಯ ಆರ್. ಕುರುಂಜಿ, ಪ್ರಾಂಶುಪಾಲ ಡಾ. ಸುರೇಶ ವಿ., ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ., ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಾಲಪ್ರದೀಪ್ ಕೆ.ಎನ್., ಟ್ರೈನಿಂಗ್ & ಪ್ಲೇಸ್‌ಮೆ೦ಟ್ ವಿಭಾಗದ ಮುಖ್ಯಸ್ಥ ಪ್ರೊ. ಪ್ರಶಾಂತ್ ಕಕ್ಕಾಜೆ ಹಾಗೂ ಪ್ರಾಧ್ಯಾಪಕ ವೃಂದ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.