














ಎಣ್ಮೂರು ಪ್ರೌಢಶಾಲೆಯಲ್ಲಿ ನೂತನ ಸಭಾಭವನದ ಗುದ್ದಲಿ ಪೂಜೆಯು ಜೂ. ೨೭ರಂದು ನಡೆಯಿತು.
ಅಲೆಕ್ಕಾಡಿ ಸುಪ್ರಭಾತ ಕಾಂಪ್ಲೆಕ್ಸ್ ನ ಮಾಲಕ ಸುದೇಶ್ ರೈಯವರು ನೂತನ ಸಭಾಭವನಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಪದ್ಮನಾಭ ರೈ ಎಂಜೀರು ಹಾಗೂ ನಿಂತಿಕಲ್ಲು ಶ್ರೀ ದೇವಿ ಎಗ್ರಿಟೆಕ್ನ ಮಾಲಕ ತಿಮ್ಮಪ್ಪ ರೈ ಬಜದಗುತ್ತು ಉಪಸ್ಥಿತರಿದ್ದರು.
ನೂತನ ಸಭಾಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಅಶೋಕ್ ಮೇಲ್ಪಾಡಿ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯ ಯತೀಂದ್ರನಾಥ ರೈ , ಮುಖ್ಯ ಶಿಕ್ಷಕ ಟೈಟಸ್ ವರ್ಗಿಸ್, ಎಸ್.ಡಿ.ಎಂ.ಸಿ ಸದಸ್ಯರಾದ ನಾಗಪ್ಪ ಗೌಡ, ರಾಜೇಶ್ ಪಲ್ಲೋಡಿ , ಶ್ರೀಮತಿ ಶಾಲಿನಿ, ಶ್ರೀಮತಿ ನಳಿನಾಕ್ಷಿ, ಸುವರ್ಣ ಜಾಕೆ, ಶರ್ಮ ಕುಮಾರ್, ತಾಯಂದಿರ ಸಮಿತಿ ಅಧ್ಯಕ್ಷೆ ಶ್ರೀಮತಿ ನಯನ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಪಟ್ಟೆ, ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಕವಿತಾ ಡಿ.ಎಂ , ಶಾಲಾ ವಿದ್ಯಾರ್ಥಿ ನಾಯಕ ಲೇಖನ್ ಎ. ಅಲೆಂಗಾರ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಪೋಷಕ ವೃಂದದವರು, ಶಾಲಾ ಎಲ್ಲಾ ಶಿಕ್ಷಕ ವೃಂದ ಹಾಗೂ ಅಡುಗೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭಾಭವನದ ಗೌರವಾಧ್ಯಕ್ಷ ವೆಂಕಪ್ಪ ಗೌಡ ಆಲಾಜೆ ಸ್ವಾಗತಿಸಿ, ಮುಖ್ಯ ಶಿಕ್ಷಕರಾದ ಟೈಟಸ್ ವರ್ಗಿಸ್ ವಂದಿಸಿದರು. ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು, ಕಾರ್ಯಕ್ರಮ ಸಂಘಟನೆಯನ್ನು ಚಿತ್ರಕಲಾ ಶಿಕ್ಷಕ ಮೋಹನ ಗೌಡ ಏನಾಜೆ ಕಾರ್ಯಕ್ರಮ ಸಂಯೋಜಿಸಿದರು.








