ಕೆ.ಎಸ್.ಆರ್.ಟಿ.ಸಿ ಸುಬ್ರಹ್ಮಣ್ಯ ಸಂಚಾರ ನಿಯಂತ್ರಕ ರಾಮಚಂದ್ರ ಮೊಟ್ಟೆತಡ್ಕ ನಿವೃತ್ತಿ

0

ಕೆ.ಎಸ್.ಆರ್.ಟಿ.ಸಿ ಸುಳ್ಯ ಘಟಕದ ಸುಬ್ರಹ್ಮಣ್ಯ ದಲ್ಲಿ ಸಂಚಾರ ನಿಯಂತ್ರಕರಾಗಿ ಮುಂಗಡ ಟಿಕೆಟ್ ಕೌಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಮಚಂದ್ರ ಮೊಟ್ಟೆತಡ್ಕರವರು ಜೂ.30 ರಂದು ಸೇವಾ ನಿವೃತ್ತಿ ಹೊಂದಿದರು.

ಇವರು ಪುತ್ತೂರು ತಾಲೂಕು ನೆಟ್ಟಣಿಗೆ ಮೂಡುನ್ನೂರು ಗ್ರಾಮದ ಮೊಟ್ಟೆತಡ್ಕ ಮೈರೋಳು- ಎಲ್ಯಣ್ಣ ಗೌಡ ಮತ್ತು ವೆಂಕಮ್ಮ ದಂಪತಿಗಳ ಪುತ್ರನಾಗಿ 22-06-1966 ರಲ್ಲಿ ಜನಸಿದರು. ನಂತರ ಒಂದನೇ ತರಗತಿಯಿಂದ 4 ನೇ ತರಗತಿವರೆಗೆ ಕೇರಳದ ಕಕ್ಕೆಬೆಟ್ಟು ಶಾಲೆ, 5 ನೇ ತರಗತಿಯಿಂದ 10 ನೇ ತರಗತಿವರೆಗೆ ಸರ್ವೋದಯ ಪ್ರೌಢಶಾಲೆ ಸುಳ್ಯಪದವು, ಪಿಯು ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಮುಗಿಸಿ,
ನವಂಬರ್ 1992 ರಲ್ಲಿ ಕ.ರಾ.ರ.ಸಾ.ಸಂಸ್ಥೆಯ ಮಂಗಳೂರು ವಿಭಾಗದ ಪುತ್ತೂರು ಘಟಕದಲ್ಲಿ ನಿರ್ವಾಹಕನಾಗಿ ಸೇರ್ಪಡೆಗೊಂಡು, ನವಂಬರ್ 2000 ದಲ್ಲಿ ಮಡಿಕೇರಿ ಘಟಕದಲ್ಲಿ ಸೇವೆ ಸಲ್ಲಿಸಿ 2002 ರಲ್ಲಿ ಪುತ್ತೂರು ಘಟಕಕ್ಕೆ ವರ್ಗಾವಣೆಯಾಗಿ 2020 ರಲ್ಲಿ ಸಂಚಾರ ನಿಯಂತ್ರಕರಾಗಿ ಮುಂಭಡ್ತಿಗೊಂಡು, ಪುತ್ತೂರು ವಿಭಾಗದ ತನಿಖಾದಳದಲ್ಲಿ ಕರ್ತವ್ಯ ನಿರ್ವಹಿಸಿ, 2022 ರಲ್ಲಿ ಪುತ್ತೂರು ಘಟಕದಲ್ಲಿ ಕರ್ತವ್ಯ ನಿರ್ವಹಿಸಿ,
ನಂತರ ಜನವರಿ 2025 ರಲ್ಲಿ ಸುಳ್ಯ ಘಟಕದ ಸುಬ್ರಹ್ಮಣ್ಯಕ್ಕೆ ವರ್ಗಾವಣೆಗೊಂಡು ಸುಬ್ರಹ್ಮಣ್ಯ ಬಸ್ ನಿಲ್ದಾಣದ ಸಂಚಾರ ನಿಯಂತ್ರಕರಾಗಿ ಮುಂಗಡ ಟಿಕೇಟ್ ಬುಕ್ಕಿಂಗ್ ಕೌಂಟರ್ ನಲ್ಲಿ ಕಾರ್ಯ ನಿರ್ವಹಿಸಿದ್ದು,
ಮೂರು ಬಾರಿ ಉತ್ತಮ ನಿರ್ವಾಹಕ ಪ್ರಶಸ್ತಿ ಪಡೆದಿರುತ್ತಾರೆ.
28.3.2002 ರಲ್ಲಿ ಹೇಮಾವತಿ ಯವರೊಂದಿಗೆ ವಿವಾಹವಾಗಿ ಈರ್ವರು ಪುತ್ರರಲ್ಲಿ, ಪ್ರಥಮ ಪುತ್ರ ಪ್ರೀತಮ್ ಡಿಪ್ಲೋಮಾ ಅಟೋಮೊಬೈಲ್ ಆಗಿ ಖಾಸಗಿ ಉದ್ಯೋಗದಲ್ಲಿದ್ದಾರೆ.
ದ್ವಿತೀಯ ಪುತ್ರ ಎಲೆಕ್ಟ್ರಾನಿಕ್ಸ್ ಅಂತಿಮ ಪರೀಕ್ಷೆ ಮುಗಿಸಿದ್ದಾರೆ.