













ಕೆ.ಎಸ್.ಆರ್.ಟಿ.ಸಿ ಸುಳ್ಯ ಘಟಕದ ಸುಬ್ರಹ್ಮಣ್ಯ ದಲ್ಲಿ ಸಂಚಾರ ನಿಯಂತ್ರಕರಾಗಿ ಮುಂಗಡ ಟಿಕೆಟ್ ಕೌಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಮಚಂದ್ರ ಮೊಟ್ಟೆತಡ್ಕರವರು ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದರು. ಇವರ ಬೀಳ್ಕೊಡುಗೆ ಸಮಾರಂಭವು ಜೂ.30 ರಂದು ಸುಳ್ಯ ಘಟಕದಲ್ಲಿ ನಡೆಯಿತು.
ಘಟಕ ವ್ಯವಸ್ಥಾಪಕರಾದ ಶ್ರೀಮತಿ ಸತ್ಯಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಚಾರ ನಿರೀಕ್ಷಕರಾದ ಪದ್ಮನಾಥನ್, ಪಾರುಪತ್ತೆದಾರ ಹರೀಶ್ ಎಸ್, ಅಕೌಂಟ್ ಸುಪರ್ ವೈಸರ್ ಶಿವಾನಂದ, ಸಂಚಾರ ನಿಯಂತ್ರಕರಾದ ನಾಗರಾಜ್ ಬಿ., ಜಗದೀಶ್, ಪಾಳಿಯ ಮುಖ್ಯಸ್ಥ ಮೋನಪ್ಪ ಗೌಡ ಗೆಜ್ಜೆ, ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಚಾಲಕ ಕೇಶವ ಮರಕ್ಕಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







