













ಸುಳ್ಯದಲ್ಲಿ ಕೆಲ ವರ್ಷಗಳ ಹಿಂದೆ ಅಟೋಚಾಲಕರಾಗಿದ್ದ, ಅಜ್ಜಾವರ ಗ್ರಾಮದ ಮುಳ್ಯ ನಿವಾಸಿ ಸದಾನಂದ ನಾಯಕ್ ರವರು ಜೂ.30ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ ಸುಮಾರು 68 ವರ್ಷ ವಯಸ್ಸಾಗಿತ್ತು.
ಸದಾನಂದ ನಾಯಕ್ ರವರು 4 ವರ್ಷಗಳ ಹಿಂದೆ ಅಜ್ಜಾವರದಿಂದ ನೆಲ್ಲಿಕಾರ್ ಎಂಬಲ್ಲಿಗೆ ಹೋಗಿದ್ದರು. ಪ್ರಸ್ತುತ ಉಡುಪಿಯಲ್ಲಿ ನೆಲೆಸಿದ್ದಾರೆ. ಜೂ.29ರಂದು ಅವರು ನಾರ್ಣಕಜೆಯ ಅವರ ಸಂಬಂಧಿಕರ ಮನೆಗೆ ಬಂದಿದ್ದು, ರಾತ್ರಿ ಊಟ ಮಾಡಿ ಮಲಗಿದ್ದರು. ಬೆಳಗ್ಗೆ ಅವರು ಏಳದೇ ಇರುವುದನ್ನು ಕಂಡ ಮನೆಯವರು ಅವರನ್ನು ಎಬ್ಬಿಸಲು ಹೋದಾಗ ಕೈ ಕಾಲು ಶೀತಗೊಂಡಿತ್ತು. ಬಳಿಕ ಮುಳ್ಯದಲ್ಲಿರುವ ಸದಾನಂದರ ಸಹೋದರ ನಾಗರಾಜರಿಗೆ ಕರೆ ಮಾಡಿ, ಮನೆಯವರು ಸದಾನಂದರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಡಪಡಿಸಿದರು. ಬಳಿಕ ಮೃತದೇಹವನ್ನು ಸಹೋದರ ಅಜ್ಜಾವರ ಗ್ರಾಮದ ನಾಗರಾಜ ಮುಳ್ಯರ ಮನೆಗೆ ಕೊಂಡು ಹೋಗಲಾಯಿತು.
ಮೃತರು ಪತ್ನಿ ಸವಿತಾ, ಮಕ್ಕಳಾದ ಶ್ರೀಹರಿ ಹಾಗೂ ಶ್ರೀರಾಂ ರನ್ನು ಅಗಲಿದ್ದಾರೆ.







