ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಮರದ ಗೆಲ್ಲು ಮುರಿದು ಬಿದ್ದು ಟ್ಯಾಕ್ಸಿ ಕಾರು ಜಖಂ

0

ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ಮರದ ಗೆಲ್ಲು ಮುರಿದು ಬಿದ್ದು ಟ್ಯಾಕ್ಸಿಕರಿನ ಮುಂಭಾಗ ಜಕ್ಕನ್ಗೊಂಡ ಘಟನೆ ಜುಲೈ 3 ರಂದು ಸಂಜೆ ನಡೆದಿದೆ.

ನಿನ್ನ ತಾನೇ ಸುಳ್ಯ ಟ್ಯಾಕ್ಸಿ ವ್ಯಾನು ಕಾರು ಚಾಲಕಮಾಲಕ ಸಂಘದವರು ಸುಳ್ಯ ತಹಶೀಲ್ದಾರರಿಗೆ ಈ ಮರದ ಅಪಾಯಕಾರಿ ರೆಂಬೆಗಳನ್ನು ತೆರವುಗೊಳಿಸುವಂತೆ ಮನವಿ ನೀಡಿದ್ದರು.

ಕಾಕತಾಳಿಯ ಎಂಬಂತೆ ಅದೇ ಮರದ ಗೆಲ್ಲು ಇಂದು ಮುರಿದು ಬಿದ್ದು ಈ ಘಟನೆ ಸಂಭವಿಸಿದೆ.
ಇದರಿಂದಾಗಿ ಸಂಘದವರು ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.