ಅರಂತೋಡು: ರಸ್ತೆ ದಾಟುತ್ತಿದ್ದ ಶಾಲಾ ವಿದ್ಯಾರ್ಥಿಗೆ ಆಟೋ ರಿಕ್ಷಾ ಡಿಕ್ಕಿ

0

ತಲೆಗೆ ಗಾಯ, ಆಸ್ಪತ್ರೆಗೆ ದಾಖಲು

ಬಸ್‌ ಹತ್ತಲು ರಸ್ತೆ ದಾಟುತ್ತಿದ್ದ ನೆಹರೂ ಮೆಮೋರಿಯಲ್ ಕಾಲೇಜು ಅರಂತೋಡು (NMC) ಪಿಯುಸಿ ವಿದ್ಯಾರ್ಥಿ ಸಚಿನ್ ಎಂಬುವವನಿಗೆ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗೆ ಗಾಯಗಳಾಗಿರುವ ಘಟನೆ ಜು 4 ರಂದು ಮಧ್ಯಾಹ್ನ ಅರಂತೋಡು ಬಳಿ ಸಂಭವಿಸಿದೆ.

ವಿದ್ಯಾರ್ಥಿಯು ಅರಂಬೂರು ನಿವಾಸಿಯಾಗಿದ್ದು ಕಾಲೇಜು ಬಿಟ್ಟ ಬಳಿಕ ರಸ್ತೆ ಬದಿಯ ಮುಂಭಾಗಕ್ಕೆ ದಾಟುತ್ತಿದ್ದಾಗ ಇದೇ ಮಾರ್ಗವಾಗಿ ಬಂದ ಆಟೋರಿಕ್ಷಾ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿಯಾದ ರಭಸಕ್ಕೆ ವಿದ್ಯಾರ್ಥಿಯ ತಲೆಗೆ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ಆತನನ್ನು ಸುಳ್ಯದ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ.