ಬಾಳೆ ಗಿಡ, ಅಡಿಕೆ ಮತ್ತು ತೆಂಗಿನ ಮರಗಳು ನಾಶ

ಅರಂಬೂರು ಎಸ್ಎಎಸ್ ಸಂಶುದ್ದೀನ್ ರವರ ಮನೆಯ ಹಿಂಭಾಗದ ತೋಟಕ್ಕೆ ಆನೆಗಳು ಲಗ್ಗೆ ಇಟ್ಟು ಅನೇಕ ಅಡಿಕೆ ಮತ್ತು ತೆಂಗಿನ ಮರಗಳನ್ನು ನಾಶ ಮಾಡಿರುವ ಘಟನೆ ಜುಲೈ 4ರಂದು ರಾತ್ರಿ ಸಂಭವಿಸಿದೆ.














ಸಂಶುದ್ದೀನ್ ರವರು ಮಂಗಳೂರಿಗೆ ಹೋಗಿದ್ದು ರಾತ್ರಿ 2 ಗಂಟೆ ಸಮಯಕ್ಕೆ ಬಂದಾಗ ಮನೆಯ ಹಿಂಬದಿಯಲ್ಲಿ ಶಬ್ದಗಳು ಕೇಳಿ ಬರುತ್ತಿದ್ದು ಹೋಗಿ ನೋಡುವಾಗ ಎರಡು ಆನೆಗಳು ಅಲ್ಲಿದ್ದ ಬಾಳೆ ಗಿಡಗಳನ್ನು ತಿನ್ನುತ್ತಿರುವ ದೃಶ್ಯ ಕಂಡು ಬಂದಿದೆ.
ತಕ್ಷಣ ಸಂಶುದ್ದೀನ್ ರವರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆನೆಗಳನ್ನು ಓಡಿಸುವ ಕಾರ್ಯಾಚರಣೆ ಮಾಡಿದ್ದಾರೆ.
ಆನೆಗಳ ದಾಳಿಯಿಂದ ತೋಟದಲ್ಲಿದ್ದ ಅನೇಕ ಅಡಿಕೆ ಮತ್ತು ತೆಂಗಿನ ಮರಗಳನ್ನು ನಾಶವಾಗಿರುವುದಾಗಿ ಸಂಶುದ್ದೀನ್ ರವರು ಸುದ್ದಿಗೆ ಮಾಹಿತಿ ನೀಡಿದ್ದಾರೆ.







