ರೋಟರಿ ಜಿಲ್ಲಾ 3181 ವತಿಯಿಂದ ಮೈಸೂರಿನಲ್ಲಿ ನಡೆದ ಪ್ರತಿಷ್ಠಿತ ಅನುಬಂಧ ಅವಾರ್ಡ್ಸ್ ನೈಟ್' ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿಡೈಮಂಡ್ ಪ್ಲಸ್’ ಅತ್ಯುನ್ನತ ಪ್ರಶಸ್ತಿಗೆ ಭಾಜನವಾಗಿದೆ.














ಸಮಾಜ ಮುಖಿ ಕಾರ್ಯಗಳು, ಹೊಂದಾಣಿಕೆ ಮತ್ತು ಪ್ರಭಾವಶಾಲಿ ಯೋಜನೆಗಳಿಗಾಗಿ ಕ್ಲಬ್ಗೆ ಈ ಗೌರವ ಸಂದಿದೆ. ಅಧ್ಯಕ್ಷ ರೊ. ಫ್ರಾನ್ಸೆಸ್ಕೊ ಅರೆಝೊ ಅವರ ಮಾರ್ಗ ದರ್ಶನದಲ್ಲಿ, ಜಿಲ್ಲಾ ಗವರ್ನರ್ ರೊ. ರಾಮಕೃಷ್ಣ ಪಿ.ಕೆ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ರೋಟರಿ ಸುಳ್ಯ ಸಿಟಿ ಅಧ್ಯಕ್ಷ ರೊ. ಹೇಮಂತ್ ಕಾಮತ್ ಮತ್ತು ಕಾರ್ಯದರ್ಶಿ ರೊ.ಸುಹಾಸ್,ಝೋನ್ ಐದರ ಲೆಫ್ಟಿನೆಂಟ್ ಅಸ್ಟಿಟೆಂಟ್ ಗವರ್ನರ್ ಪ್ರಮೋದ್ ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ರಾಗೇಶ್ ರಾಘವ್ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಸಮ್ಮುಖದಲ್ಲಿ ಜಿಲ್ಲಾ ಗವರ್ನರ್ರಿಂದ ಪ್ರಶಸ್ತಿ ಸ್ವೀಕರಿಸಿದರು.
ಕಳೆದ ರೋಟರಿ ವರ್ಷದಲ್ಲಿ ಸುಳ್ಯ ರೋಟರಿ ಕ್ಲಬ್ ಆರೋಗ್ಯ ಶಿಬಿರಗಳು, ಶಾಲೆಗಳಿಗೆ ಮೂಲಸೌಕರ್ಯ, ರಕ್ತದಾನ ಶಿಬಿರ,ಕಣ್ಣಿನ ಅರೋಗ್ಯದ ವಿಶೇಷ ಕಾಳಜಿ, ಪರಿಸರ ಜಾಗೃತಿಗಾಗಿ ಗಿಡ ನೆಡುವ ಕಾರ್ಯಕ್ರಮ, ಸ್ವಚ್ಛತಾ ಆಂದೋಲನ ಹಾಗೂ ಗಣನೀಯ ದೇಣಿಗೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿತ್ತು. ಈ ಸಾಧನೆಯನ್ನು ಗುರುತಿಸಿ `ಡೈಮಂಡ್ ಪ್ಲಸ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ರೊ. ಹೇಮಂತ್ ಕಾಮತ್ ಸಂಸ್ಥೆಯ ಸರ್ವ ಸದಸ್ಯರ ಸಾಮೂಹಿಕ ಪ್ರಯತ್ನದಿಂದ ಈ ಸಾಧನೆ ಸಾಧ್ಯವಾಗಿದೆ. ಎಲ್ಲ ಸದಸ್ಯರಿಗೂ ಹೃದಯ ತುಂಬಿದ ಅಭಿ ನಂದನೆಗಳು’ ಎಂದು ಕೃತಜ್ಞತೆ ಸಲ್ಲಿಸಿದರು.







