ದಿ. ತಂಗಮ್ಮ ಪನೇಡ್ಕರವರ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ

0

ಜೀವನದ ಆದರ್ಶ ಬದುಕಿನಲ್ಲಿ ಮಾದರಿಯಾದವರು : ಕರುಣಾಕರ ನಿಡಿಂಜಿ

ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಸೆಂಟ್ರಲ್ ಸ್ಟೋರ್ ಹಾಗೂ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮಾಲೀಕ ಪನೇಡ್ಕ ಬೋಜಪ್ಪ ಗೌಡರ ಧರ್ಮಪತ್ನಿ ದಿ. ತಂಗಮ್ಮ ಪನೇಡ್ಕ ಅವರು ಜೂನ್ 15 ರಂದು ನಿಧರಾಗಿದ್ದು, ವೈಕುಂಠ ಸಮಾರಾಧನೆ, ಶ್ರದ್ಧಾಂಜಲಿ ಸಭೆಯು ಜುಲೈ 5 ರಂದು ತೆಕ್ಕಿಲ್ ಸಮುದಾಯ ಭವನ ಅರಂತೋಡಿನಲ್ಲಿ ನಡೆಯಿತು.

ಮೃತರ ಬಗ್ಗೆ ನಿವೃತ್ತ ಉಪನ್ಯಾಸಕರಾದ ಕರುಣಾಕರ ನಿಡಿಂಜಿ ಮಾತನಾಡಿ ” ತಂಗಮ್ಮ ಅವರು ಎಲ್ಲರಿಗೂ ಆದರ್ಶಪ್ರೀಯರು. ಯಾಕೆಂದರೆ ತನ್ನ ಕುಟುಂಬವನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವಲ್ಲಿ ಉತ್ತಮ ಗೃಹಣಿಯಾದವರು. ಬದುಕಿನಲ್ಲಿ ವಿದ್ಯೆಯನ್ನು ಪಡೆಯದಿದ್ದರೂ ಜೀವನದಲ್ಲಿ ಆದರ್ಶ ಬದುಕನ್ನು ಕಟ್ಟಿಸಿಕೊಂಡು ತನ್ನ ಪತಿ ಮತ್ತು ಮಕ್ಕಳನ್ನು ನೋಡಿಕೊಂಡು ಜೀವನದಲ್ಲಿ ಯಶಸ್ವಿಯಾದ ಅಮ್ಮನನ್ನು ನಾವು ಕಳೆದುಕೊಂಡಿದ್ದೇವೆ ” ಎಂದು ಗುಣಗಾನಗೈದು ನುಡಿ ನಮನ ಸಲ್ಲಿಸಿದರು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಈ ಸಂದಭದಲ್ಲಿ ಪತಿ ಬೋಜಪ್ಪ ಗೌಡ , ಮಕ್ಕಳಾದ ಹರಿಪ್ರಸಾದ್ ಪಿ. ಬಿ, ಕಿಶೋರ್ ಕುಮಾರ್ ಪಿ.ಬಿ , ಶ್ರೀಮತಿ ಲತಾ ಪುರುಷೋತ್ತಮ , ಸೊಸೆಯಂದಿರಾದ ಶ್ರೀಮತಿ ಪ್ರತಿಭಾ ಹರಿಪ್ರಸಾದ್, ಶ್ರೀಮತಿ ನಳಿನಿ ಕಿಶೋರ್ ಕುಮಾರ್ , ಮೊಮ್ಮಕ್ಕಳು ಪ್ರಜ್ವಲ್ , ಪೃಥ್ವಿ , ಕಿಶನ್ , ಸ್ವಾತಿ ,ದೇವಿ ಚರಣ್ ಕಾನಡ್ಕ, ಭವ್ಯ, ಮೇಘಾ , ಅಪಾರ ಕುಟುಂಬಸ್ಥರು ಬಂಧುಮಿತ್ರರು , ಗಣ್ಯರು, ಊರಿನವರು ಉಪಸ್ಥಿತರಿದ್ದರು.