
















ದೇವಚಳ್ಳ ಗ್ರಾಮದ ಅಡ್ಡನಪಾರೆ – ಪುಳಿಕುಕ್ಕುನ ನಿವೃತ್ತ ಶಿಕ್ಷಕ ವೆಂಕಟ್ರಮಣ ಗೌಡ ಅಡ್ಡನಪಾರೆ ಯರು ಜೂ.18 ನಿಧನರಾದರು.
ಅವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯಕ್ರಮ, ವೈಕುಂಠ ಸಮಾರಾಧನೆಯು ಜು.4 ರಂದು ಸುಳ್ಯದ ಅಂಬೆಟೆಡ್ಕದ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.
ನಿವೃತ್ತ ಶಿಕ್ಷಕಿ ಶ್ರೀಮತಿ ಗಿರಿಜ ಎಂ.ವಿ, ನಿವೃತ್ತ ಶಿಕ್ಷಕ ಗೋಪಾಲ ರಾವ್, ಮೊಮ್ಮಗ ಜಗತ್ ರಾಜ್, ನಿವೃತ್ತ ಶಿಕ್ಷಕ ಬಾಬು ಗೌಡ ಅಚ್ರಪ್ಪಾಡಿ ರವರು ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು. ಅಳಿಯ ಡಾ.ಮಹೇಶ್ ಕೆ.ಕೆ ಕರಿಂಬಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಈಸಂದರ್ಭದಲ್ಲಿ ಮೃತರು ಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ನಾಗವೇಣಿ, ಪುತ್ರಿಯರಾದ ಡಾ. ಕವಿತಾ ಕೆ.ಮಹೇಶ್, ಶ್ರೀಮತಿ ರಶ್ಮಿ ಉದಯಶಂಕರ, ಅಳಿಯಂದಿರಾದ ಡಾ.ಮಹೇಶ್ ಕೆ.ಕೆ ಕರಿಂಬಿ, ಉದಯಶಂಕರ, ಹೊಸಮಾರು,ಪುತ್ತೂರು, ಶ್ರೀಮತಿ ಸುಬ್ಬಮ್ಮ ನಾಗಪ್ಪ ಗೌಡ ಅಡ್ಡನಪಾರೆ, ಸಹೋದರ ಜನಾರ್ಧನ ಗೌಡ ಅಡ್ಡನಪಾರೆ, ಶ್ರೀಮತಿ ರತ್ನಾವತಿ, ಲಕ್ಷ್ಮೀಶ ಅಡ್ಡನಪಾರೆ,ಶ್ರೀಮತಿ ಭವ್ಯ ಲಕ್ಷ್ಮೀಶ, ವೀರಪ್ಪ ಗೌಡ ಬ್ಯಾಗಡಹಳ್ಳಿ, ಶ್ರೀಮತಿ ಭವಾನಿ, ಸಹೋದರ, ಸಹೋದರಿ ಹಾಗೂ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು , ಬಂಧುಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾರಿಗೆ ಭಗವದ್ಗೀತಾ ಪುಸ್ತಕ ವಿತರಣೆ ಮಾಡಲಾಯಿತು. ಆಗಮಿಸಿ ಎಲ್ಲಾ ಬಂಧುಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು.







