ರೋಟರಿ ಚಾರಿಟೇಬಲ್ ಟ್ರಸ್ಟ್ :ಚೇರ್ಮನ್ ಆಗಿ ರೊ.ಲತಾ ಮಧುಸೂದನ್, ಕಾರ್ಯದರ್ಶಿಯಾಗಿ ಸಂಚಾಲಕರಾಗಿ ರೊ.ಪ್ರಭಾಕರನ್ ನಾಯರ್ ಹಾಗೂ ಖಜಾಂಜಿಯಾಗಿ ರೊ.ಮಧುಸೂದನ್ ಆಯ್ಕೆ

0

ರೋಟರಿ ಕ್ಲಬ್ ಸುಳ್ಯ ಪ್ರಾಯೋಜಿತ -ರೋಟರಿ ಚಾರಿಟೇಬಲ್ ಟ್ರಸ್ಟ್ ನ 2026-27 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಜು. 08 ರಂದು ಟ್ರಸ್ಟ್ ನ ಕಚೇರಿಯಲ್ಲಿ ಟ್ರಸ್ಟ್ ನ ಚೇರ್ಮನ್ ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷೆ – ರೊ. ಲತಾ ಮಧುಸೂದನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿಯಾಗಿ/ ಸಂಚಾಲಕರಾಗಿ ರೊ. ಪ್ರಭಾಕರನ್ ನಾಯರ್ ಖಜಾಂಜಿಯಾಗಿ ರೊ.ಮಧುಸೂದನ್ ಅವಿರೋಧವಾಗಿ ಪುನರಾಯ್ಕೆಯಾದರು ಹಾಗೂ ಅಧಿಕಾರ ಸ್ವೀಕರಿಸಿದರು. ನಂತರ ನಡೆದ ಸಭೆಯಲ್ಲಿ ಟ್ರಸ್ಟಿಗಳಾದ ರೊ.ಪ್ರಭಾಕರನ್ ನಾಯರ್ ರವರ ಹೆಸರನ್ನು ರೊ.ಡಾ. ರಾಮಮೋಹನ್ ಹಾಗೂ ಡಾ. ಪುರುಷೋತ್ತಮ ಕೂಜುಗೋಡು ಕಟ್ಟೆಮನೆ ರವರು ರೊ.ಮಧುಸೂದನ್ ರವರ ಹೆಸರನ್ನ ಸೂಚಿಸಿದರು.
ಟ್ರಸ್ಟಿಗಳಾದ ರೊ.ಹರಿರಾಯ ಕಾಮತ್ ಮತ್ತು ರೊ. ಆನಂದ ಖಂಡಿಗರವರು ಅನುಮೋದಿಸಿದರು. ಈ ಸಂದರ್ಭದಲ್ಲಿ ನಿರ್ಗಮಿತ ಟ್ರಸ್ಟಿ ರೊ.ಸೀತಾರಾಮ ರೈ ಸವಣೂರುರವನ್ನು ೨೦೨೫-೨೬ನೇ ಸಾಲಿನ ಚೇರ್‌ಮೆನ್ ಡಾ. ರಾಮ್‌ಮೋಹನ್‌ರವರನ್ನು ಗೌರವಿಸಿ ಬೀಳ್ಕೊಡಲಾಯಿತು. ೧೯೮೦-೮೧ ರಿಂದ ರೋಟರಿ ಕ್ಲಬ್ ಸುಳ್ಯ ಪ್ರಾಯೋಜಿತ ರೋಟರಿ ಚಾರಿಟೇಬಲ್ ಟ್ರಸ್ಟಿನ ಅಡಿಯಲ್ಲಿ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.