ಸುಬ್ರಹ್ಮಣ್ಯ: ಪೋಲೀಸ್ ಹುದ್ದೆಗೆ ಅರ್ಜಿ ಹಾಕಿದವರಿಗಾಗಿ ಸಾಮಾನ್ಯ ಜ್ಞಾನ ಪರೀಕ್ಷೆ

0

ಜು.19 ರಂದು ಪರೀಕ್ಷೆ, ನೋಂದಣಿಗೆ ಜು.10 ಕೊನೆ ದಿನಾಂಕ

ಈಗಾಗಲೇ ಕರ್ನಾಟಕ ರಾಜ್ಯ ನಾಗರಿಕ ಪೋಲೀಸ್ ಹುದ್ದೆಗೆ ಅರ್ಜಿ ಹಾಕಿದವರಿಗಾಗಿ ಪೂರ್ವ ತಯಾರಿಗಾಗಿ ಸಾಮಾನ್ಯ ಜ್ಞಾನ ಪರೀಕ್ಷೆ ಜು.19 ರಂದು ಸುಬ್ರಹ್ಮಣ್ಯ ಪೋಲೀಸ್ ಠಾಣೆ ನೇತೃತ್ವದಲ್ಲಿ, ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆಯಲಿದೆ. ಪೊಲೀಸ್ ಹುದ್ದೆಗೆ ಅರ್ಜಿ ಹಾಕಿರುವವರು ಜು.10 ರ ಮೊದಲು ಹೆಸರು ನೋಂದಾಯಿಸುವಂತೆ ಕೋರಲಾಗಿದೆ.

90 ನಿಮಿಷಗಳ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಯಲಿದ್ದು ಪರೀಕ್ಷೆಯಲ್ಲಿ ಋಣಾತ್ಮಕ (NEGETIVE) ಮೌಲ್ಯಮಾಪನ ಇರುತ್ತದೆ. ಪರೀಕ್ಷಾ ಸಮಯ ಬೆಳಿಗ್ಗೆ 11.00ರಿಂದ 12.30ರ ವರೆಗೆ ಇರಲಿದ್ದು ನೋಂದಾಯಿತರು. 30ನಿಮಿಷ ಮುಂಚಿತವಾಗಿ ಹಾಜರಾಗತಕ್ಕದ್ದು.
ಪರೀಕ್ಷಾ ವಿಜೇತರಿಗೆ
ಆಕರ್ಷಕ ನಗದು ಬಹುಮಾನ , ಪ್ರೋತ್ಸಾಹಕ ಬಹುಮಾನ ದೊರೆಯಲಿದೆ ಎಂದು ಸುಬ್ರಹ್ಮಣ್ಯ ಎಸ್ ಐ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ನಾಗರಿಕ ಪೋಲೀಸ್ ಇಲಾಖೆಗೆ ಅರ್ಜಿ ಹಾಕಿದ ಸ್ವೀಕೃತಿಯ ಪ್ರತಿಯನ್ನು , ಆಧಾರ್ ನಂ. ನೀಡಿ ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಅವಕಾಶ ವಿದ್ದು ಈ ಕೆಳಗಿನ ನಂಬರ್ ಸಂಪರ್ಕಿಸ ಬಹುದಾಗಿದೆ.
95355 56173, 90355 56143.