ಮರ್ಕಂಜ : ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಸಭೆ

0

ನೂತನ ಬ್ರಹ್ಮಕಲಶೋತ್ಸವ ಸಮಿತಿ ರಚನೆ

ಗೌರವಾಧ್ಯಕ್ಷರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಅಧ್ಯಕ್ಷರಾಗಿ ಹರೀಶ್ ಕಂಜಿಪಿಲಿ, ಪ್ರ. ಕಾರ್ಯದರ್ಶಿಯಾಗಿ ಕೃಷ್ಣ ಕಿಶೋರ್ ಬಾಳಿಲ, ಕೋಶಾಧಿಕಾರಿಯಾಗಿ ಮೋಹಿತ್ ಹರ್ಲಡ್ಕ ಆಯ್ಕೆ

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚ ಸ್ಥಾಪನೆಗಳಲ್ಲಿ ಪ್ರಧಾನವಾದ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪುನರ್ ಪ್ರತಿಷ್ಟ ಅಷ್ಟಬಂಧ ಬ್ರಹ್ಮಕಲಶೋತ್ಸವವು 2027ರ ಜನವರಿಯಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿಸಭೆಯು ಕಾವೂರು ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ನೂತನ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಅಧ್ಯಕ್ಷರಾಗಿ ಹರೀಶ್ ಕಂಜಿಪಿಲಿ, ಪ್ರ. ಕಾರ್ಯದರ್ಶಿಯಾಗಿ ಕೃಷ್ಣ ಕಿಶೋರ್ ಬಾಳಿಲ, ಕೋಶಾಧಿಕಾರಿಯಾಗಿ ಮೋಹಿತ್ ಹರ್ಲಡ್ಕ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಮಾಜಿ ಸಚಿವ ಎಸ್. ಅಂಗಾರ, ಡಾ. ಲೀಲಾಧರ್ ದೋಳ, ಮೋಹನ್ ರಾಮ್ ಸುಳ್ಳಿ, ರಾಜೇಶ್ ನಾಥ್ ಜೀ., ಡಾ| ಪ್ರಾಭಾತ್ ಬಲ್ನಾಡು, ಅಮೃತ್ ಕುಮಾರ್ ರೈ ಸೇವಾಜೆ, ರಾಜಾರಾಮ್ ಭಟ್ ಬೆಟ್ಟ, ರವಿರಾಮ್ ರೈ ಮಿತ್ತೂರು, ಜಗನ್ಮೋಹನ ರೈ ರೆಂಜಾಳ, ಉಪಾಧ್ಯಕ್ಷರಾಗಿ ಮಹಾಬಲ ಕಟ್ಟಕ್ಕೋಡಿ, ರಾಘವ ಗೌಡ ಕಂಜಿಪಿಲಿ, ಲಿಂಗಪ್ಪ ನಾಯ್ಕ ತೋಟಚವಾಡಿ, ರಾಧಾಕೃಷ್ಣ ದೋಳ, ಮೋನಪ್ಪ ಪೂಜಾರಿ ಹೈದಗೂರು, ಧರ್ಮಪಾಲ ಸುಳ್ಳಿ, ಶ್ರೀನಿವಾಸ ದೇಶಕೋಡಿ, ಕಮಲಾಕ್ಷ ಪುರ, ವೆಂಕಟ್ರಮಣ ಕನಕಮಜಲು, ನಿತೇಶ್ ಎರ್ಮೆಟ್ಟಿ, ವಿಶ್ವನಾಥ ಅಂಗಡಿಮಜಲು, ಸುಭಾಷ್ ಎರ್ಮೆಟ್ಟಿ, ಪುರುಷೋತ್ತಮ ಚಿತ್ತಡ್ಕ, ರಾಧಾಕೃಷ್ಣ ಕುದನೆಕೋಡಿ, ಸುಬ್ರಮಣ್ಯ ಉಪಾಧ್ಯಯ ಹೊಸೊಲಿಕೆ, ರಾಮಚಂದ್ರ ಹಲ್ದಡ್ಕ, ಜಲಜಾಕ್ಷಿ ದೋಳ, ರಾಜೇಶ್ವರಿ ಕುಮಾರಸ್ವಾಮಿ ರೆಂಜಾಳ, ರೋಹಿಣಿ ಅಂಗಡಿಮಜಲು, ಎಲ್ಯಣ್ಣ ಅರಮನೆಗಯ, ನಾರಾಯಣ ಗೌಡ ಪಾನತ್ತಿಲ, ಚಿನ್ನಪ್ಪ ಬೇರಿಕೆ, ರಾಮಕೃಷ್ಣ ಭಟ್ ಪೊಣ್ಣುರುಕಜೆ, ಹಾಗೂ ಜತೆ ಕಾರ್ಯದರ್ಶಿಯಾಗಿ ಅಚ್ಚುತ ಮಾಸ್ಟರ್ ತೇರ್ಥಮಜಲು, ಯತೀಶ ಕಂಜಿಪಿಲಿ, ಕಿರಣ್ ಗುಡ್ಡೆಮನೆ, ಗೋವಿಂದ ಅಳವುಪಾರೆ, ಬಾಲಕೃಷ್ಣ ಜೋಗಿಮೂಲೆ, ಗಿರೀಶ್ ನಾರ್ಕೋಡು, ಜಯಪ್ರಕಾಶ್ ಗುಂಡಿ, ದಿನೇಶ್ ಬೊಮ್ಮಾರು ಆಯ್ಕೆಯಾದರು.