ಆಲೆಟ್ಟಿ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಠಬಂಧ ಕಲಶೋತ್ಸವದ ಸಮಾಲೋಚನಾ ಸಭೆ

0

ಜು.20 ರಂದು ಪೂರ್ವ ಭಾವಿ ತಾಂಬೂಲ ಪ್ರಶ್ನಾ ಚಿಂತನೆ

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಠಬಂಧ ಬ್ರಹ್ಮಕಲಶೋತ್ಸವದ ಕುರಿತು ಸಮಾಲೋಚನಾ ಸಭೆಯು ದೇವಸ್ಥಾನದ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಗಿರೀಶ್ ನಾರ್ಕೋಡು ರವರ ಅಧ್ಯಕ್ಷತೆಯಲ್ಲಿ ಜು.11 ರಂದು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

2026 ರ ಡಿಸೆಂಬರ್
ತಿಂಗಳಲ್ಲಿ ಪುನ: ಪ್ರತಿಷ್ಠಾ ಅಷ್ಠಬಂಧ ಅಷ್ಟ ಬಂಧ ಬ್ರಹ್ಮಕಲಶೋತ್ಸವ ನಡೆಸುವ ಕುರಿತು ಕುಂಟಾರು ಕ್ಷೇತ್ರದ ರವೀಶ ತಂತ್ರಿಯವರನ್ನು ಭೇಟಿ ಮಾಡಲಾಗಿದ್ದು, ಇದರ ಪೂರ್ವ ಭಾವಿಯಾಗಿ ತಂತ್ರಿಯವರ ನಿರ್ದೇಶನದಂತೆ ಒಂದು ದಿನದ ತಾಂಬೂಲ ಪ್ರಶ್ನಾ ಚಿಂತನೆಯನ್ನು ಜು.20 ರಂದು ಜ್ಯೋತಿಷ್ಯರಾದ ಪಂಜದ ಎಸ್.ಎನ್.ಭಟ್ ರವರ ನೇತೃತ್ವದಲ್ಲಿ ನಡೆಯಲಿರುವುದು. ಪ್ರಶ್ನಾ ಚಿಂತನೆಯ ಪ್ರಕಾರ ಮುಂದಿನ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು. ಅದೇ ದಿನ ಬ್ರಹ್ಮಕಲಶೋತ್ಸವದ ನೂತನ ಸಮಿತಿಯನ್ನು ರಚಿಸುವುದಾಗಿ ನಿರ್ಧರಿಸಲಾಯಿತು.
ಆರಂಭದಲ್ಲಿ ಇತ್ತೀಚೆಗೆ ಅಗಲಿದ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ರವರಿಗೆ ದೇವಳದ ಸಮಿತಿ ವತಿಯಿಂದ ನುಡಿನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಹೇಮಚಂದ್ರ ಬೈಪಡಿತ್ತಾಯ,
ಶ್ರೀಪತಿ ಬೈಪಡಿತ್ತಾಯ, ಜಯಪ್ರಕಾಶ್ ಬೈಪಡಿತ್ತಾಯ,ಗಗನ್ ಬೈಪಡಿತ್ತಾಯ, ಶ್ರೀಮತಿ ಶಾಂತ ಬೈಪಡಿತ್ತಾಯ, ಶ್ರೀಮತಿ ಸುಕನ್ಯಾ ಬೈಪಡಿತ್ತಾಯ, ಅರ್ಚಕರಾದ ಹರ್ಷಿತ್ ಬನ್ನಿಂತಾಯ, ಸಮಿತಿಯ
ಗೌರವಾಧ್ಯಕ್ಷರಾದ ಕೃಷ್ಣ ಕಾಮತ್ ಅರಂಬೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ‌ಎನ್.ಎ.ರಾಮ
ಚಂದ್ರ, ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷರಾದ ಅಶೋಕ ಪ್ರಭು,ಆರ್ಥಿಕ ಸಮಿತಿ ಸಂಚಾಲಕ ಜಯಪ್ರಕಾಶ್ ಕುಂಚಡ್ಕ, ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವಾಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ತೀರ್ಥಕುಮಾರ್ ಕುಂಚಡ್ಕ, ವ್ಯ.ಸ.ಸದಸ್ಯರಾದ ಸತೀಶ್ಚಂದ್ರ ಕಲ್ಲೆಂಬಿ, ನವೀನ್ ಕುಮಾರ್ ಗುಂಡ್ಯ,ಕಮಲಾಕ್ಷ ಕೊಯಿಂಗಾಜೆ, ಶ್ರೀಮತಿ ಶೋಭಾ ಗುಂಡ್ಯ, ಭಜನಾ ಸಂಘದ ಗೌರವಾಧ್ಯಕ್ಷರಾದ ಅಚ್ಚುತ ಮಣಿಯಾಣಿ ಆಲೆಟ್ಟಿ, ಶಿವಪ್ರಸಾದ್ ಆಲೆಟ್ಟಿ, ಅಧ್ಯಕ್ಷರಾದ ಶ್ರೀನಾಥ್ ಆಲೆಟ್ಟಿ, ಸದಸ್ಯರಾದ ಸುಂದರ ಆಲೆಟ್ಟಿ, ಲಕ್ಷ್ಮಣ ಗೌಡ ಪರಿವಾರ, ನಂಜುಂಡ ದೇವಸ್ಯ, ಕೊರಗಪ್ಪ ಮಾಸ್ತರ್ ಕಣಕ್ಕೂರು, ಪ್ರವೀಣ್ ಆಲೆಟ್ಟಿ, ರಾಧಾಕೃಷ್ಣ ರೈ ಆಲೆಟ್ಟಿ, ರಾಮಚಂದ್ರ ಬಾಳೆಹಿತ್ಲು, ದಕ್ಷಿತ್ ಬಾಳೆಹಿತ್ಲು, ಗಣೇಶ ಆಚಾರ್ಯ ಆಲೆಟ್ಟಿ ಉಪಸ್ಥಿತರಿದ್ದರು. ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.