














ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ( ಪ್ರೌಢ ಶಾಲಾ ವಿಭಾಗ )2026-27 ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮ ಜು. 10.ರಂದು ನಡೆಯಿತು .
ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ ವಹಿಸಿದ್ದರು. ಕಡಬ ಸರಕಾರಿ ಪದವಿ ಪೂರ್ವ ಕಾಲೇಜು ಅರ್ಥಶಾಸ್ತ್ರ ಉಪನ್ಯಾಸಕ ವಾಸುದೇವ ರವರು
ಉದ್ಘಾಟಿಸಿ “ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳನ್ನು ಯಾವ ರೀತಿಯಾಗಿ ಬಳಸಿಕೊಳ್ಳಬೇಕು ಮತ್ತು ಹೇಗೆ ನಿಭಾಯಿಸಿ ಕೊಂಡು ಹೋಗಬೇಕು’ ಎಂದು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಯರಾದ
ದೇವಿಪ್ರಸಾದ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ತಮ್ಮ ಖಾತೆಯನ್ನು ಪರಿಚಯಿಸಿಕೊಂಡರು. ವೇದಿಕೆಯಲ್ಲಿ ಇಎಲ್ಸಿ ಕ್ಲಬ್ ನ ನೋಡಲ್ ಶಿಕ್ಷಕರಾದ ಭರತ್ ಎಂ ಕೆ ಹಾಗೂ ಹಿರಿಯ ಶಿಕ್ಷಕಿ ಶ್ರೀಮತಿ ನಿರ್ಮಲಾಕ್ಷಿ ಪಿ ಉಪಸ್ಥಿತರಿದ್ದರು ಮತ್ತು ಇತರ ಶಿಕ್ಷಕರು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಹಿಂದಿ ಅತಿಥಿ ಶಿಕ್ಷಕಿ
ಭವಿತ ಕೆ ನಿರೂಪಿಸಿದರು.
ಮುಖ್ಯ ಶಿಕ್ಷಕ ದೇವಿ ಪ್ರಸಾದ್ ಸ್ವಾಗತಿಸಿದರು.ವಿದ್ಯಾರ್ಥಿ ನಾಯಕಿ ಅನ್ವಿತಾ ವಂದಿಸಿದರು.







