ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾಗಿ ಎಂ.ಬಿ.ಸದಾಶಿವ

0

ಸುಳ್ಯ
ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾಗಿ ಎಂ.ಬಿ.ಸದಾಶಿವ ಆಯ್ಕೆಯಾಗಿದ್ದಾರೆ.

ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಲಿಂಗಪ್ಪ ಗೌಡ ಕೇರ್ಪಳ ಅವರು ವಯೋಸಹಜ ಕಾರಣದಿಂದ ತಮ್ಮ ಸ್ಥಾನದಿಂದ ನಿರ್ಗಮಿಸಿರುವ ಹಿನ್ನೆಲೆಯಲ್ಲಿ, ಆ ಸ್ಥಾನಕ್ಕೆ ನೂತನ ಕಾರ್ಯಾಧ್ಯಕ್ಷರಾಗಿ ಸಾಮಾಜಿಕ ಧುರೀಣರಾದ ಎಂ. ಬಿ. ಸದಾಶಿವ ಮತ್ತು ಖಾಯಂ ಸದಸ್ಯರಾಗಿ ಸಂಘಟಕರಾದ ಅಶೋಕ ಪ್ರಭು ಆಯ್ಕೆಯಾಗಿರುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿಯವರು ತಿಳಿಸಿದ್ದಾರೆ.