ನಾಳೆ (ಜು.16) ಕಲ್ಕುಡ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ, ತಂಬಿಲ ಸೇವೆ ಹಾಗೂ ರಾತ್ರಿ ದುರ್ಗಾಪೂಜೆ

0

ಸುಳ್ಯದ ನಾವೂರು ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಸಂಕ್ರಮಣ ಪ್ರಯುಕ್ತ
ಜು.16 ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಕ್ರಮಣ ಪೂಜೆ ನಡೆಯಲಿರುವುದು.
ಈ ಸಂದರ್ಭದಲ್ಲಿ ತಂತ್ರಿಯವರ ನೇತೃತ್ವದಲ್ಲಿ
ನಾಗನಿಗೆ ತಂಬಿಲ‌ ಸೇವೆ ಮತ್ತು ಶ್ರೀ ರಕ್ಷೇಶ್ವರಿ ದೈವಕ್ಕೆ ತಂಬಿಲ ಸೇವೆಯಾಗಲಿರುವುದು. ಸಂಕ್ರಮಣದ ದಿನದಂದು ಭಕ್ತಾದಿಗಳಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ.
ಸಂಜೆ ಗಂಟೆ 7:00 ರಿಂದ ದುರ್ಗಾ ಪೂಜೆಯು ನಡೆಯಲಿರುವುದು. ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದವಿತರಣೆಯಾಗಲಿರುವುದು ಎಂದು ಆಡಳಿತ ‌ಧರ್ಮದರ್ಶಿಯವರು ತಿಳಿಸಿದ್ದಾರೆ.