ರೋಟರಿ ಕ್ಲಬ್ ಸುಳ್ಯ, ರೋಟರಿ ಸುಳ್ಯ ಸಿಟಿ, ಇನ್ನರ್ ವೀಲ್ ಕ್ಲಬ್ ಸುಳ್ಯ ವತಿಯಿಂದ ಗಿರೀಶ್ ಭಾರದ್ವಾಜ್ ರವರಿಗೆ ನುಡಿನಮನ

0

ಮಾನವೀಯ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ, 160ಕ್ಕೂ ಹೆಚ್ಚು ತೂಗು ಸೇತುವೆಗಳ ನಿರ್ಮಾತೃ, ಪದ್ಮಶ್ರೀ ಪುರಸ್ಕೃತ ರೊ. ಗಿರೀಶ್ ಭಾರದ್ವಾಜ್ ಅವರ ನೆನಪಿಗಾಗಿ ರೋಟರಿ ಕ್ಲಬ್ ಸುಳ್ಯ, ರೋಟರಿ ಕ್ಲಬ್ ಸುಳ್ಯ ಸಿಟಿ ಮತ್ತು ಇನ್ನರ್ ವೀಲ್ ಕ್ಲಬ್ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ “ನುಡಿ ನಮನ” ಶ್ರದ್ಧಾಂಜಲಿ ಸಭೆಯನ್ನು ಜು.15 ರಂದು ಸಂಜೆ ಸುಳ್ಯದ ರೋಟರಿ ಕಮ್ಯುನಿಟಿ ಹಾಲ್‌ನಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿ ನೆರೆದಿದ್ದ ಎಲ್ಲಾ ಸದಸ್ಯರು ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷರಾದ ರೊ. ಲತಾ ಮಧುಸೂದನ್ ಅವರು ವಹಿಸಿದ್ದರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷರಾದ ರೊ. ರಾಗೇಶ್ ರಾಘವನ್, ಎಜಿ ಆನಂದ ಕಂಡಿಗ, ಝೋನ್ ಲೆಫ್ಟಿನೆಂಟ್ ಗಿರೀಶ್ ನಾರ್ಕೋಡ್, ಇನ್ನರ್ ವೀಲ್ ಕ್ಲಬ್ ಸುಳ್ಯ ಅಧ್ಯಕ್ಷರು,.ಶ್ರೀಮತಿ ಪ್ರಜ್ಞಾ ಎಮ್ ಆರ್
. ಕಾರ್ಯದರ್ಶಿ ಡಾ ಸ್ಮಿತಾ ಹರ್ಷವರ್ಧನ್ ಹಾಗೂ ರೋಟರಿ ಕ್ಲಬ್ ಸುಳ್ಯ ಸಿಟಿಯ ಕಾರ್ಯದರ್ಶಿ ರೋ. ಪುರಂದರ ರೈ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ರೊ. ರಾಮಚಂದ್ರ ಪಿ ಮತ್ತು ಸಿಎ ರೊ. ಗಣೇಶ್ ಭಟ್ ಅವರು ಭಾಗವಹಿಸಿ ಗಿರೀಶ್ ಭಾರದ್ವಾಜ್ ಅವರ ಬದುಕು ಮತ್ತು ಸಾಧನೆಗಳ ಕುರಿತು ಮಾತನಾಡಿದರು.

“ಮಾನವೀಯತೆಗೆ ತಮ್ಮನ್ನು ಅರ್ಪಿಸಿಕೊಂಡ ಮಹಾನ್ ಚೇತನಕ್ಕೆ ನಮ್ಮ ಹೃತ್ಪೂರ್ವಕ ಶ್ರದ್ಧಾಂಜಲಿ” ಎಂಬ ಘೋಷಣೆಯೊಂದಿಗೆ ಆರಂಭವಾದ ಈ ಸಭೆಯಲ್ಲಿ ಗಿರೀಶ್ ಅವರ ಆಪ್ತ ಮಿತ್ರರು ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.

ಪಿಇಎಸ್ ಕಾಲೇಜು ಮಂಡ್ಯದಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ ಸಂದರ್ಭದಿಂದ ಹಿಡಿದು, ರೋಟರಿ ಚಟುವಟಿಕೆಗಳು ಮತ್ತು ಸೇತುವೆ ನಿರ್ಮಾಣದವರೆಗಿನ ಗಿರೀಶ್ ಅವರ ಬದುಕಿನ ವಿವಿಧ ಆಯಾಮಗಳನ್ನು ಭಾಷಣಕಾರರು ವಿವರಿಸಿದರು. ಅವರ ಸಾತ್ವಿಕ ಸ್ವಭಾವ, ಸಂಯಮ, ಕೃತಜ್ಞತೆ ಮತ್ತು ಸೇವಾ ಮನೋಭಾವದ ಕುರಿತು ಭಾವನಾತ್ಮಕವಾಗಿ ನೆನಪಿಸಿಕೊಂಡರು.

ಪದ್ಮಶ್ರೀ ಪ್ರಶಸ್ತಿ ಬಂದ ನಂತರವೂ ಯಾವುದೇ ಬದಲಾವಣೆಯಾಗದೆ ಸರಳವಾಗಿ ಇದ್ದ ಗಿರೀಶ್ ಅವರ ವ್ಯಕ್ತಿತ್ವವನ್ನು ವಿಶೇಷವಾಗಿ ಸ್ಮರಿಸಲಾಯಿತು. ಸುಳ್ಯದ ದೊಡ್ಡೇರಿ ತೂಗು ಸೇತುವೆ ನಿರ್ಮಾಣದಲ್ಲಿ ಅವರ ಪಾತ್ರ, ರೋಟರಿಯ ಐ-ಕ್ಯಾಂಪ್ ಮತ್ತು ಇತರ ಸಮಾಜಮುಖಿ ಕೆಲಸಗಳಲ್ಲಿ ಅವರ ಕೊಡುಗೆಯನ್ನು ಕೂಡಾ ಸಭೆಯಲ್ಲಿ ಉಲ್ಲೇಖಿಸಲಾಯಿತು.

ಇನ್ನರ್ ವೀಲ್ ಕ್ಲಬ್‌ನ ಸದಸ್ಯೆಶ್ರೀಮತಿ ಆಶಿತಾ ಕೇಶವ್ ಮತ್ತು ಪಿ ಎ ಜಿ ರೋ ಜಿತೇಂದ್ರ ಎನ್ ಎ ಗಿರೀಶ್ ಭಾರದ್ವಾಜ್ ಅವರಿಗೆ ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ನುಡಿ ನಮನ ಸಲ್ಲಿಸಿದ ಎಜಿ ಆನಂದ ಖಂಡಿಗ ಅವರು ಮಾತಿನ ಮಧ್ಯೆ ರೋಟರಿ ಜಿಲ್ಲೆಯ ವತಿಯಿಂದ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಿದರು.
ರೋಟರಿ ಕ್ಲಬ್ ಸುಳ್ಯದ ಕಾರ್ಯದರ್ಶಿ ರೊ. ಹರಿರಾಯ ಕಾಮತ್ ವಂದಿಸಿದರು.

ಗಿರೀಶ್ ಭಾರದ್ವಾಜ್ ಅವರು ಕಟ್ಟಿದ ಸೇತುವೆಗಳು ಜನರನ್ನು ಮಾತ್ರವಲ್ಲ, ಮನಸ್ಸುಗಳನ್ನೂ ಬೆಸೆಯುವ ಕೆಲಸ ಮಾಡಿವೆ. ಅವರ ಸೇವೆ ಮುಂದಿನ ಪೀಳಿಗೆಗೆ ಸದಾ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ, ಇನ್ನರ್ ವೀಲ್ ಕ್ಲಬ್‌ನ ಸದಸ್ಯರು, ಗಿರೀಶ್ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು.