ಕರ್ಲಪ್ಪಾಡಿ : ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಬಿಡುಗಡೆ

0

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಇದರ ವತಿಯಿಂದ ನಡೆಯುವ 4ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಜುಲೈ 17 ರಂದು ನಡೆಯಿತು.

ಪ್ರಧಾನ ಅರ್ಚಕರಾದ ಈಶ್ವರ ಭಟ್ ಅವರ ನೇತೃತ್ವದಲ್ಲಿ ಆಮಂತ್ರಣವನ್ನು ದೇವರ ಸಮ್ಮುಖದಲ್ಲಿರಿಸಿ ಪ್ರಾರ್ಥನೆ ಸಲ್ಲಿಸಿ, ನಂತರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಧನoಜಯ ಅಡ್ಪ್ಪoಗಾಯ ಅವರ ಮೂಲಕ ಶ್ರೀ ಶಾಸ್ತಾವೇಶ್ವರ ಸಭಾಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ಬೀನಾ ಕರುಣಾಕರ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಪಡ್ಡoಬೈಲು ವಂದಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ರೂಪಾನಂದ ಕರ್ಲಪ್ಪಾಡಿ, ಪ್ರಸಾದ ರೈ ಮೇನಾಲ, ರಾಮಣ್ಣ ಪೂಜಾರಿ, ಸುಂದರ, ಶ್ರೀಮತಿ ಸುಲೋಚನಾ ರವೀಶ್, ಅಯ್ಯಪ್ಪ ಸನ್ನಿಧಾನ ಮೊಕ್ತೇಸರರಾದ ಶಿವಪ್ರಕಾಶ್
ಅಡ್ಪoಗಾಯ, ಶ್ರೀಮತಿ ಸುಮತಿ ಭಟ್ , ಕರುಣಾಕರ ಕೊಡೆoಕಿರಿ, ಶಿವಾನಂದ ಪಡ್ಡoಬೈಲು, ಸುಕುಮಾರ ಕೊಡ್ತುಗುಳಿ, ಶ್ರೀಮತಿ ಗುಲಾಬಿ ಸುಕುಮಾರಕೊಡ್ತುಗುಳಿ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಪೂರ್ವಾಧ್ಯಕ್ಷೆ ರುಕ್ಮಿಣಿ ಮುಡೂರು, ಗೌರವಸಲಹೆಗಾರಾದ ಶ್ರೀಮತಿ ವಸಂತಿ ಪುರುಷೋತ್ತಮ, ಕೋಶಾಧಿಕಾರಿ ಜಾನಕಿ ಮುಡೂರು, ಪುಷ್ಪ ಕರ್ಲಪ್ಪಾಡಿ, ಯಶ್ವoತಿ, ವೇದಾವತಿ, ಶ್ರೀಮತಿ ಸಾವಿತ್ರಿ ಜಯನ್, ಪ್ರತಾಪ ಯುವಕ ಮಂಡಲ ಅಜ್ಜಾವರ ಅಧ್ಯಕ್ಷ ಗುರುರಾಜ್, ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶಶ್ಮಿ ಭಟ್, ಹಾಗೂ ಉತ್ಸವ ಸಮಿತಿ, ಪೂಜಾ ಸಮಿತಿ ಪದಾಧಿಕಾರಿಗಳು ಹಾಗೂ ಊರ ಭಕ್ತರು ಉಪಸ್ಥಿತರಿದ್ದರು.