













ಗುತ್ತಿಗಾರಿನ ಸಮಾಜಿಕ ಮುಂದಾಳು ಬಿಟ್ಟಿ ಬಿ ನೆಡುನೀಲಂ ಅವರ ತಂದೆ ಆಂಟೋನಿ ಜೇಮ್ಸ್ ನೆಡುನೀಲಂ ಜು.16 ರಂದು ಕೇರಳದ ಕೋಟ್ಟಾಯಂನ ತಮ್ಮ ಪುತ್ರಿಯ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಹತ್ತು ದಿನಗಳ ಹಿಂದೆ ಕೇರಳದ ಕೊಟ್ಟಾಯಂನಲ್ಲಿ ತಮ್ಮ ಮಗಳ ಮನೆ ಶ್ರೀಮತಿ ಬಿನಿ ಸಾಬು ಅವರ ಮನಗೆ ಹೋಗಿದ್ದರು. ಬಿಟ್ಟಿ ಅವರೇ ಅಲ್ಲಿ ಬಿಟ್ಟು ಬಂದಿದ್ದರು. ಅಲ್ಲಿ ಅವರು ಹೃದಯಾಘಾತಕೊಳಗಾಗಿದ್ದಾರೆ. ಮೃತರು ಪತ್ನಿ ಟೆಲ್ಸಿ, ಪುತ್ರ ಬಿಟ್ಟಿ ಬಿ ನೆಡುನೀಲಂ, ಪುತ್ರಿ ಶ್ರೀಮತಿ ಬಿನಿ ಸಾಬು, ಶ್ರೀಮತಿ ಬಿಂದು ಹಾಗೂ ಸೊಸೆ ಬೀನಾ ಬಿಟ್ಟಿ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ. ಜು.20 ರಂದು ಬೆಳಗ್ಗೆ 10 ಗಂಟೆಯಿಂದ ಗುತ್ತಿಗಾರು ಸೈಂಟ್ ಮೇರಿಸ್ ಚರ್ಚ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು. ಮಧ್ಯಾಹ್ನ 3 ಗಂಟೆ ತನಕ ಧಪನ ಕಾರ್ಯಕ್ರಮ ನಡೆಯಲಿದೆ ಎಂದು ಮೃತರ ಮನೆಯವರು ತಿಳಿಸಿದ್ದಾರೆ.







